ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುವ ಲಕ್ಷಣಗಳೇ ಕಾಣ್ತಿಲ್ಲ. ಇಂದು ಕೂಡ 9265 ಮಂದಿಗೆ ಸೋಂಕು ತಗುಲಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 7,35,371ಕ್ಕೆ ಏರಿಕೆಯಾಗಿದೆ. ಇತ್ತ 8662 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 6,11,167 ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಕೊರೊನಾಗೆ 75 ಸೋಂಕಿತರು ಬಲಿಯಾಗಿದ್ದು, ಒಟ್ಟು 10,198ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. 19 ಮಂದಿ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಸಕ್ರಿಯ 1,13,987 ಪ್ರಕರಣಗಳು ಇದ್ದು, 925 ಮಂದಿ ತೀವ್ರನಿಗಾ ಘಟಕದಲ್ಲಿ ಇದ್ದಾರೆ. ಕಳೆದ 14 ದಿನಗಳಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕವಾಗಿ 5,66,492 ದ್ವಿತೀಯ ಸಂಪರ್ಕಿತರಲ್ಲಿ 5,08,755 ಮಂದಿ ಇದ್ದಾರೆ. 7 ದಿನಗಳಲ್ಲಿ 1,27,121 ಹೋಮ್ ಕ್ವಾರೆಂಟೈನ್ನಲ್ಲಿ ಇದ್ದಾರೆ. ಇಂದು 1,13,771 ಜನರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 9265 ಸೋಂಕಿತರು ಪತ್ತೆಯಾಗಿದ್ದಾರೆ.