ETV Bharat / state

ಬಿಎಂಟಿಸಿಯಿಂದ 921 ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್​ಗೆ ಚಾಲನೆ: 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ: ರಾಮಲಿಂಗಾ ರೆಡ್ಡಿ - ಈಟಿವಿ ಭಾರತ್ ಕನ್ನಡ ಸುದ್ದಿ

ನೂತನ ವಿದ್ಯುತ್ ಚಾಲಿತ ನಾನ್​ ಎಸಿ ಮಾದರಿ ಬಸ್​ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದು ಚಾಲನೆ ನೀಡಿದ್ದಾರೆ.

ವಿದ್ಯುತ್ ಚಾಲಿತ ನಾನ್​ ಎಸಿ ಮಾದರಿ ಬಸ್​
ವಿದ್ಯುತ್ ಚಾಲಿತ ನಾನ್​ ಎಸಿ ಮಾದರಿ ಬಸ್​
author img

By

Published : Jul 28, 2023, 5:48 PM IST

ವಿದ್ಯುತ್ ಚಾಲಿತ ನಾನ್​ ಎಸಿ ಮಾದರಿ ಬಸ್​

ಬೆಂಗಳೂರು : ಬಿಎಂಟಿಸಿಗೆ ವಿದ್ಯುತ್ ಚಾಲಿತ ಹೊಸ ಬಸ್​ಗಳು ಸೇರ್ಪಡೆಯಾಗಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೂತನ ವಿದ್ಯುತ್ ಚಾಲಿತ ನಾನ್ ಎಸಿ ಮಾದರಿ ಬಸ್​ಗಳಿಗೆ ಇಂದು ಚಾಲನೆ ನೀಡಿದ್ದಾರೆ. ಬೆಂಗಳೂರಿಗರಿಗೆ ಪರಿಸರ-ಸ್ನೇಹಿ ಪ್ರಯಾಣವನ್ನು ಕಲ್ಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 921 ಟಾಟಾ ಎಲೆಕ್ಟ್ರಿಕ್ ಬಸ್​ಗಳನ್ನು ಸೇರ್ಪಡೆಗೊಳಿಸಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್​ನ ಪ್ರಥಮ ಪ್ರೊಟೊಟೈಪ್ ಬಸ್​ಗಳನ್ನು ಲೋಕಾರ್ಪಣೆ ಮಾಡಲಾಯಿತು. ಶಾಂತಿನಗರದಿಂದ ವಿಧಾನಸೌಧದವರೆಗೆ ಸಚಿವರು ಹಾಗೂ ಅಧಿಕಾರಿಗಳು ಪ್ರಯಾಣ ಬೆಳೆಸಿದರು.

ಈ ವೇಳೆ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರಿನ ಜನತೆ ಬಿಎಂಟಿಸಿಯ ನೂತನ ವಿದ್ಯುತ್ ವಾಹನಗಳಲ್ಲಿ ಪ್ರಯಾಣಿಸಿ ಮಾಲಿನ್ಯ ರಹಿತ ನಗರದ ಅನುಭವವನ್ನು ಪಡೆಯಲಿದ್ದಾರೆ. ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್​ನಲ್ಲಿ ರೂ. 500 ಕೋಟಿಗಳನ್ನು ನಿಗಮಗಳಿಗೆ, ಬಸ್ ಖರೀದಿಗಾಗಿ ವಿಸ್ತರಿಸುವುದಾಗಿ ತಿಳಿಸಿದರು.

ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿ, ಈ ನೂತನ 921 ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನ ಬಲಕ್ಕೆ ಈ ಆರ್ಥಿಕ ವರ್ಷದೊಳಗಾಗಿ ಹಂತ - ಹಂತವಾಗಿ ಸೇರ್ಪಡೆ ಮಾಡುವುದಾಗಿ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ನೂತನ 921 ಟಾಟಾ ವಿದ್ಯುತ್ ವಾಹನಗಳನ್ನು ಭಾರತ ಸರ್ಕಾರದ ಫೇಮ್-2 ಯೋಜನೆಯಡಿ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಿದೆ.

ಬಸ್ ವಿಶೇಷತೆ ಏನು?:

- ಈ ಬಸ್​​​ಗಳು 12.0 ಮೀಟರ್ ಉದ್ದದ, ಕೆಳ-ಮಹಡಿ ಎಲೆಕ್ಟ್ರಿಕ್ ಬಸ್​ಗಳಾಗಿರುತ್ತದೆ ಹಾಗೂ Floor ಎತ್ತರ: 400 mm ಇದೆ.

- ಈ ಬಸ್ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಅದರ ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

- ಬೆಂ.ಮ.ಸಾ.ಸಂಸ್ಥೆಯು 1500 ಎಲೆಕ್ಟ್ರಿಕ್ ಬಸ್​ಗಳನ್ನು ತನ್ನ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಗ್ರ್ಯಾಂಡ್ ಚಾಲೆಂಜ್ ನಲ್ಲಿ ಭಾಗವಹಿಸಿತ್ತು.

- ಜಿಸಿಸಿ ಆಧಾರದಲ್ಲಿ ಈ ಬಸ್​ಗಳ ಪ್ರತಿ ಕಿ.ಮೀ ಕಾರ್ಯಾಚರಣೆಯ ದರ ರೂ.41.01 ಮೊತ್ತವಾಗಿರುತ್ತದೆ.

- ಭಾರಿ ಕೈಗಾರಿಕೆ ಸಚಿವಾಲಯ, ಕೇಂದ್ರ ಸರ್ಕಾರದ ವತಿಯಿಂದ 921 ಟಾಟಾ ಎಲೆಕ್ಟ್ರಿಕ್ ಬಸ್​ಗಳಿಗೆ ಸಹಾಯಧನವನ್ನು ಒದಗಿಸಲಾಗಿದೆ.

- ಈ ಸಹಾಯಧನದ ಅನ್ವಯ ಬೆಂ.ಮ.ಸಾ.ಸಂಸ್ಥೆ ಒಟ್ಟು 921 ಎಲೆಕ್ಟ್ರಿಕ್ ಬಸ್​ಗಳನ್ನು ಒಟ್ಟು ವೆಚ್ಚದ ಒಪ್ಪಂದ (GCC) ಮಾದರಿ ಆಧಾರದ ಮೇಲೆ ಕಾರ್ಯಾಚರಣೆ ಮಾಡ ಬಹುದಾಗಿರುತ್ತದೆ.

- ಪ್ರತಿ ಬಸ್​ ಅನ್ನು 45 ನಿಮಿಷ Opportunity Charging ಮಾಡಲಾಗುವುದು.

- ಈ ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆ ಮಾಡಲು 10 ಘಟಕಗಳನ್ನು ಗುರುತಿಸಲಾಗಿದೆ. 03 ಶಾಂತಿನಗರ, 04 ಜಯನಗರ, 10 ಹೆಣ್ಣೂರು, 16 ದೀಪಾಂಜಲಿನಗರ, 21 ರಾಜರಾಜೇಶ್ವರಿನಗರ, 22 ಪೀಣ್ಯ 2ನೇ ಹಂತ, 27 ಜಿಗಣಿ, 29 ಕೆ.ಆರ್.ಪುರಂ, 35 ಸೀಗೇಹಳ್ಳಿ, 39 ಹೊಸಕೋಟೆಯಲ್ಲಿ ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ: ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ - ಗದಗ ನಡುವೆ ವೋಲ್ವೊ ಬಸ್ ಸೇವೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.