ಬೆಂಗಳೂರು: ಲಾಕ್ಡೌನ್ ಹೇರಿದ ನಂತರ ಮಾಗಡಿ ರಸ್ತೆ, ಯಶವಂತಪುರ, ಕೋರಮಂಗಲ, ಶಿವಾಜಿನಗರ ಠಾಣೆ ಸೇರಿ 9 ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ 55 ಮಂದಿಯನ್ನು ಕ್ವಾರಂಟೈನ್ ಮತ್ತು ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಗರದಲ್ಲಿ ಈವರೆಗೂ 675 ಪೊಲೀಸರಲ್ಲಿ ಸೋಂಕು ದೃಢವಾಗಿದ್ದು, 415 ಮಂದಿ ಗುಣಮುಖರಾಗಿದ್ದಾರೆ. ಸುಮಾರು 1,100 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಇದರಿಂದಾಗಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.