ETV Bharat / state

ರಾಜ್ಯದಲ್ಲಿಂದು 8,249 ಮಂದಿಗೆ ಕೊರೊನಾ: ಪಾಸಿಟಿವಿಟಿ ಪ್ರಮಾಣ 4.86ಕ್ಕೆ ಇಳಿಕೆ! - ಕರ್ನಾಟಕ ಕೊರೊನಾ ಬುಲೆಟಿನ್​​

2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇಂದು ಒಟ್ಟು 8,249 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪಾಸಿಟಿವಿಟಿ ಪ್ರಮಾಣ ಕೂಡ 4.86ಕ್ಕೆ ಇಳಿಕೆಯಾಗಿದೆ.

covid cases
8249 ಮಂದಿಗೆ ಕೋವಿಡ್ ಪಾಸಿಟಿವ್
author img

By

Published : Jun 11, 2021, 7:55 PM IST

ಬೆಂಗಳೂರು: ರಾಜ್ಯದಲ್ಲಿಂದು ಕಳೆದ ಎರಡು ತಿಂಗಳಲ್ಲೇ ಅತಿ ಕಡಿಮೆ ಕೋವಿಡ್ ಪಾಸಿಟಿವ್ ಕೇಸ್​ ಪತ್ತೆಯಾಗಿವೆ. ಇಂದು 8,249 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಪಾಸಿಟಿವಿಟಿ ಪ್ರಮಾಣ ಕೂಡ 4.86ಕ್ಕೆ ಇಳಿಕೆಯಾಗಿದೆ.

ಎರಡನೇ ಅಲೆಯಲ್ಲಿ ಸೋಂಕು ಪ್ರಮಾಣ ಏರಿ, ಇಳಿಕೆಯಾದ ನಂತರ ಇದು ಸಮಾಧಾನಕರ ಬೆಳವಣಿಗೆಯಾಗಿದೆ. ಕಳೆದ ಏಪ್ರಿಲ್ 13ರಂದು 8778 ಪ್ರಕರಣಗಳು ದೃಢಪಟ್ಟಿದ್ದವು. ಅದಾದ ನಂತರ ಏರುಗತಿಯಲ್ಲಿದ್ದ ಕೋವಿಡ್ ಇಂದು ಅತಿ ಕಡಿಮೆ ಜನರಲ್ಲಿ ದೃಢಪಟ್ಟಿದೆ.

ಇಂದು 159 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, 14975 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 25,11,105 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 2,03,769 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 27,47,539ಕ್ಕೆ ಏರಿಕೆಯಾಗಿದ್ದು, ಈವರೆಗೆ 32,644 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಅತೀ ಕಡಿಮೆ ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 1154 ಜನ ಸೋಂಕಿಗೆಗೊಳಗಾಗಿದ್ದಾರೆ. 48 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 73, ಬಳ್ಳಾರಿಯಲ್ಲಿ 189, ಬೆಳಗಾವಿ 436, ಬೆಂ.ಗ್ರಾಮಾಂತರ 234, ಬೀದರ್ 09, ಚಾಮರಾಜನಗರ 162, ಚಿಕ್ಕಬಳ್ಳಾಪುರ 168, ಚಿಕ್ಕಮಗಳೂರು 332, ಚಿತ್ರದುರ್ಗ 123, ದ.ಕನ್ನಡ 506, ದಾವಣಗೆರೆ 260, ಧಾರವಾಡ 217, ಗದಗ 66, ಹಾಸನ 733, ಹಾವೇರಿ 65, ಕಲಬುರಗಿ 29, ಕೊಡಗು 189, ಕೋಲಾರ 179, ಕೊಪ್ಪಳ 98, ಮಂಡ್ಯ 366, ಮೈಸೂರು 817, ರಾಯಚೂರು 61, ರಾಮನಗರ 57, ಶಿವಮೊಗ್ಗ 429, ತುಮಕೂರು 576, ಉಡುಪಿ 215, ಉ.ಕನ್ನಡ 311, ವಿಜಯಪುರ 174, ಯಾದಗಿರಿಯಲ್ಲಿ 21 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.