ETV Bharat / state

ರಾಜ್ಯದಲ್ಲಿಂದು 792 ಮಂದಿಗೆ ಕೋವಿಡ್ ದೃಢ; 2 ಸೋಂಕಿತರು ಬಲಿ

author img

By

Published : Jan 11, 2021, 11:01 PM IST

ರಾಜ್ಯದಲ್ಲಿ 2 ಮಂದಿ ಕೋವಿಡ್ ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,140 ಕ್ಕೆ ಏರಿಕೆ ಆಗಿದೆ.

corona
ಕೋವಿಡ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 792 ಮಂದಿಗೆ ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 9,27,559 ಕ್ಕೆ ಏರಿಕೆ ಆಗಿದೆ.

ಇಬ್ಬರು ಕೋವಿಡ್‌ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,140 ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. ಇಂದು 593 ಮಂದಿ ಗುಣಮುಖರಾಗಿದ್ದು, ಈವರೆಗೆ 9,05,751 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.‌

ಇದನ್ನೂ ಓದಿ: 11 ದಿನದೊಳಗೆ ಮತ್ತೆ ನಿಂಬಾಳ್ಕರ್ ಎತ್ತಂಗಡಿ.. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗ

ತೀವ್ರ ನಿಗಾ ಘಟಕದಲ್ಲಿ 202 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 9,649 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 21,446 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 57,555 ಮಂದಿ ಇದ್ದರೆ, ದ್ವಿತೀಯ ಸಂಪರ್ಕದಲ್ಲಿ 64280 ಜನ ಇದ್ದಾರೆ.‌ ವಿಮಾನ ನಿಲ್ದಾಣದಿಂದ 3,495 ಪ್ರಯಾಣಿಕರು ಬಂದಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 453 ಮಂದಿಗೆ ಹೊಸ ಸೋಂಕು ದೃಢಪಟ್ಟಿದ್ದು, ಈ ಮೂಲಕ 3,92,581ಕ್ಕೆ ಏರಿಕೆ ಆಗಿದೆ. 261 ಡಿಸ್ಚಾರ್ಜ್​ ಆಗಿದ್ದು, 3,82,166 ಮಂದಿ ಗುಣಮುಖರಾಗಿದ್ದಾರೆ. ಇಂದು ಯಾವುದೇ ಮರಣ ಪ್ರಕರಣಗಳು ವರದಿಯಾಗಿಲ್ಲ. ಈವರೆಗೆ 4,346 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ 6,068 ಸಕ್ರಿಯ ಪ್ರಕರಣಗಳು ಇವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.