ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆಯ ತೀವ್ರತೆ ಜೋರಾಗಿದ್ದು, ಸಾವಿನ ಸಂಖ್ಯೆಯಲ್ಲಿ ಈ ಹಿಂದಿನ ಹಳೆಯ ದಾಖಲೆಯನ್ನೂ ಮೀರಿಸಿದೆ. ಕಳೆದ 24 ಗಂಟೆಯಲ್ಲಿ 592 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಈ ಮೂಲಕ ಸಾವಿಗೀಡಾದವರ ಸಂಖ್ಯೆ 17,804ಕ್ಕೆ ಏರಿದೆ. ಇನ್ನು 48,781 ಮಂದಿಗೆ ಇಂದು ಒಂದೇ ದಿನ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 18,38,885ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು 28,623 ಮಂದಿ ಗುಣಮುಖರಾಗಿದ್ದು, ಈವರೆಗೆ 12,84,420 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 5,36,641ಕ್ಕೆ ಏರಿದ್ದು, ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 30.69 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 1.21 ರಷ್ಟಾಗಿದೆ.
ಯುಕೆಯಿಂದ 75 ಪ್ರಯಾಣಿಕರು ಬಂದಿದ್ದು ತಪಾಸಣೆ ಮಾಡಲಾಗಿದೆ. 86 ಜನರಲ್ಲಿ ಯುಕೆಯ ರೂಪಾಂತರಿ ಕೊರೊನಾ ದೃಢಪಟ್ಟಿದೆ.