ETV Bharat / state

ಕಳೆದ‌ 5 ತಿಂಗಳಲ್ಲಿ 58.92 ಕೋಟಿ ರೂ. ದಂಡ ವಸೂಲಿ ಮಾಡಿದ ಬೆಂಗಳೂರು ಸಂಚಾರಿ ಪೊಲೀಸರು - ಬೆಂಗಳೂರು ಲೇಟೆಸ್ಟ್ ನ್ಯೂಸ್

ಮೇ ತಿಂಗಳಿನಲ್ಲಿ 125 ಮಂದಿಗೆ ಆ್ಯಕ್ಸಿಡೆಂಟ್ ಆಗಿ 27 ಮಂದಿ ಮೃತಪಟ್ಟಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ರಸ್ತೆಗಳು ಖಾಲಿಯಿದ್ದು, ಅಜಾಗರೂಕತೆ ಹಾಗೂ ಅತಿವೇಗ ಚಾಲನೆಯಿಂದ ಕೆಲ ಅಪಘಾತಗಳು ನಡೆದಿವೆ..

58.92 crores Fine collected by bangalore traffic police
58.92 ಕೋಟಿ ರೂ. ದಂಡ ವಸೂಲಿ
author img

By

Published : Jun 13, 2021, 3:17 PM IST

ಬೆಂಗಳೂರು : ಕೊರೊನಾ ಆತಂಕದ ನಡುವೆಯೂ ಕಳೆದ‌ ಐದು ತಿಂಗಳಿನಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಿರುವ ನಗರ ಸಂಚಾರ ಪೊಲೀಸ್ ಇಲಾಖೆಯು 58.92 ಕೋಟಿ ರೂ. ದಂಡ ವಸೂಲಿ ಮಾಡಿದೆ. ಲಾಕ್​ಡೌನ್​ಗೂ ಮುನ್ನ ಸಂಚಾರಿ ನಿಯಮ‌ ಉಲ್ಲಂಘಿಸಿದ್ದ ಸವಾರರ ಮೇಲೆ‌ ದಂಡ ಹಾಕಿ ವಸೂಲಿ ಮಾಡಿದ್ದ ಸಂಚಾರಿ ಪೊಲೀಸರು, ಲಾಕ್​ಡೌನ್​ನಲ್ಲಿ ಭೌತಿಕವಾಗಿ ಸವಾರರನ್ನು ತಡೆಯದೇ ಆನ್​ಲೈನ್ ಮುಖಾಂತರ ದಂಡ ಪಾವತಿಸಿಕೊಂಡಿದ್ದು, ಮೇ 31ರವರೆಗೆ 58.92 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ಅಪಘಾತ ಪ್ರಕರಣ ಗಣನೀಯವಾಗಿ ಇಳಿಕೆಯಾಗಿವೆ. ಮೇ ತಿಂಗಳಲ್ಲಿ 27 ಮಂದಿ ಸಾವನ್ನಪ್ಪಿದ್ದು, 125 ಕೇಸ್ ದಾಖಲಾಗಿವೆ. ಲಾಕ್​​ಡೌನ್ ಅವಧಿಯಲ್ಲಿ ಸಂಚಾರಿ ನಿಯಮ‌ ಉಲ್ಲಂಘಿಸಿದ್ದ ವಾಹನ ಸವಾರರ ಮೇಲೆ, ಡಿಜಿಟಲ್ ವ್ಯವಸ್ಥೆಯಾದ ಫೀಲ್ಡ್ ಟ್ರಾಫಿಕ್ ವೈಲೇಷನ್ ಡಿವೈಸ್​ಗಳ ಮೂಲಕ ದಂಡ ವಿಧಿಸಲಾಗುತ್ತಿದೆ‌‌. ಈ ಡಿವೈಸ್​ನಲ್ಲಿ ಸಂಚಾರಿ ಉಲ್ಲಂಘನೆಯ ಒಂದು ಫೋಟೋ ಕ್ಲಿಕ್ ಮಾಡಿದರೆ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ ಕಚೇರಿಗೆ ತಲುಪಲಿದೆ. ಇದರಂತೆ ವಿಳಾಸ ಸಮೇತ ಬೈಕ್ ಸವಾರನಿಗೆ ದಂಡ ಬೀಳುತ್ತೆ‌.

ಇದನ್ನೂ ಓದಿ: ಪೆಟ್ರೋಲ್​​​ GSTಗೆ ಸೇರಿಸುವುದು ಪರಿಹಾರವಲ್ಲ, ಅದು ಶೋಷಣೆ: ಹೆಚ್​​ಡಿಕೆ

ಇದಷ್ಟೇ ಅಲ್ಲದೆ 1,500 ಸಿಸಿ ಕ್ಯಾಮೆರಾಗಳಿದ್ದು, ಕಮಾಂಡ್ ಸೆಂಟರ್​ನಲ್ಲಿ ನಿಗಾವಹಿಸಿ, ಉಲ್ಲಂಘನೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿ ಅಪಘಾತ ಪ್ರಮಾಣದಲ್ಲಿ ಇಳಿಕೆಯಾಗಿದೆ‌‌. ಸಾವಿನ ಪ್ರಮಾಣ ಕಡಿಮೆಯಾಗಿದೆ‌. ಕಳೆದ ಏಪ್ರಿಲ್​ನಲ್ಲಿ 247 ಅಪಘಾತವಾಗಿ, 46 ಮಂದಿ ಸಾವನ್ನಪ್ಪಿದ್ದಾರೆ.

ಮೇ ನಲ್ಲಿ 125 ಮಂದಿಗೆ ಆ್ಯಕ್ಸಿಡೆಂಟ್ ಆಗಿ 27 ಮಂದಿ ಮೃತಪಟ್ಟಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ರಸ್ತೆಗಳು ಖಾಲಿಯಿದ್ದು, ಅಜಾಗರೂಕತೆ ಹಾಗೂ ಅತಿವೇಗ ಚಾಲನೆಯಿಂದ ಕೆಲ ಅಪಘಾತಗಳು ನಡೆದಿವೆ.

ಅಪಘಾತ ಮತ್ತು ಸಾವಿನ ಅಂಕಿ-ಅಂಶ:

ತಿಂಗಳು ಆಕ್ಸಿಡೆಂಟ್ ‌‌‌‌ಸಾವು
ಜನವರಿ 314 57
ಫೆಬ್ರವರಿ ‌‌311 49
ಮಾರ್ಚ್ 326 70
ಏಪ್ರಿಲ್ 247 46
ಮೇ 125 27

ETV Bharat Logo

Copyright © 2024 Ushodaya Enterprises Pvt. Ltd., All Rights Reserved.