ETV Bharat / state

ಗಲಭೆ ಪ್ರಕರಣ: ಬರೋಬ್ಬರಿ 42 ಎಫ್​​ಐಆರ್... 200ಕ್ಕೂ ಹೆಚ್ಚು ಆರೋಪಿಗಳ ಬಂಧನ

author img

By

Published : Aug 15, 2020, 8:05 PM IST

ಬೆಂಗಳೂರು ಗಲಭೆ ಬಗ್ಗೆ ಡಿಸಿಪಿ ಶರಣಪ್ಪ ಪ್ರತಿಕ್ರಿಯಿಸಿದ್ದು, ಈವರೆಗೆ ಬಂಧಿಸಲಾದ ಆರೋಪಿಗಳ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ ತನಿಖೆಯ ಹಂತವನ್ನು ವಿವರಿಸಿದ್ದಾರೆ.

42 F IR  more than 200 accused  arrest  in Bangalore riot case
ಗಲಭೆ ಪ್ರಕರಣ: ಬರೋಬ್ಬರಿ 42 ಎಫ್​​ಐಆರ್...200ಕ್ಕೂ ಹೆಚ್ಚು ಆರೋಪಿಗಳ ಬಂಧನ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಇದುವರೆಗೂ 42 ಎಫ್ಐಆರ್ ದಾಖಲಾಗಿದ್ದು‌, 200ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ‌.

ಗಲಭೆ ಪ್ರಕರಣದಲ್ಲಿ‌ ಈವರೆಗೆ ಇನ್ನೂ ಸಾಕಷ್ಟು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಈಗಾಗಲೇ ಆರೋಪಿಗಳ ಬಂಧನಕ್ಕೆ ಕೆಲವು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಕೆಲವು ತಂಡಗಳು ತನಿಖೆ ಮಾಡುತ್ತಿವೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಟ್ಯಾನರಿ ರಸ್ತೆ ಮತ್ತು ಕಾವಲ್ ಬೈರಸಂದ್ರದಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದೇವೆ.

ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಪ್ರತಿಕ್ರಿಯೆ

ಜೊತೆಗೆ ಅರೆಸೇನಾ ಪಡೆಗಳು ಸಹ ಎಲ್ಲೆಡೆ ಗಸ್ತು ತಿರುಗುತ್ತಿವೆ. ಆರೋಪಿಗಳ ಹಿನ್ನೆಲೆ, ಸಂಪರ್ಕಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.