ETV Bharat / state

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 381.72 ಕೋಟಿ ರೂ. ಬಾಕಿ: ಸಚಿವ ಮುನೇನಕೊಪ್ಪ - ಕಬ್ಬಿನಿಂದ ಉತ್ಪಾದಿಸುವ ಎಥನಾಲ್ ಲಾಭ ರೈತರಿಗೆ ಹಂಚಿಕೆ

ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಜೂ.1ರ ಗಡುವು ನೀಡಲಾಗಿತ್ತು. ಈ ಪೈಕಿ 99% ಹಣ ಪಾವತಿ ಮಾಡಲಾಗಿದೆ. ಇನ್ನೂ 381.72 ಕೋಟಿ ರೂ. ಪಾವತಿ ಬಾಕಿ ಉಳಿದುಕೊಂಡಿದೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾಹಿತಿ ನೀಡಿದರು.

ಸಚಿವ ಮುನೇನಕೊಪ್ಪ
ಸಚಿವ ಮುನೇನಕೊಪ್ಪ
author img

By

Published : Jun 9, 2022, 7:50 PM IST

ಬೆಂಗಳೂರು: ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 381.72 ಕೋಟಿ ರೂಪಾಯಿ ಬಾಕಿ‌ ಹಣ ಇದೆ. ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಜೂ.1ರ ಗಡುವು ನೀಡಲಾಗಿತ್ತು. ಮೊದಲ‌ ಬಾರಿಗೆ 6 ಲಕ್ಷ ಮೆಟ್ರಿಕ್‌ ಟನ್ ಕಬ್ಬು ನುರಿಯಲಾಗಿದೆ. ಒಟ್ಟು 19,634.84 ಕೋಟಿ ರೂ. ಕಬ್ಬು ನುರಿಸಲಾಗಿದೆ. ಈ ಪೈಕಿ 99% ಹಣ ಪಾವತಿ ಮಾಡಲಾಗಿದೆ. ಸುಮಾರು 19,427.13 ಕೋಟಿ ರೂ. ಮೊದಲ‌ ಬಾರಿಗೆ ರೈತರ ಖಾತೆಗೆ ಜಮೆ ಮಾಡಲಾಗಿದೆ. 381.72 ಕೋಟಿ ರೂ. ಪಾವತಿ ಬಾಕಿ ಉಳಿದುಕೊಂಡಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾಹಿತಿ ನೀಡಿದರು.

ಸರ್ಕಾರದ ನಿಯಮದ ಪ್ರಕಾರ, ದುಡ್ಡು ಪಾವತಿಸುವಂತೆ ಮನವಿ ಮಾಡಲಾಗಿದೆ. ನಿಯಮಾನುಸಾರ ಕ್ರಮ ತೆಗೆದುಕೊಂಡು, ರೈತರ ಖಾತೆಗೆ ಕಬ್ಬಿನ ಬಿಲ್ ಹಣ ಜಮೆ ಮಾಡಲಾಗುತ್ತದೆ. ಈ ಬಾರಿ ರೈತರಿಗೆ ದುಡ್ಡು ಕೊಡಿಸಿಲ್ಲ ಎಂಬ ಕೂಗು ಕೇಳಿ ಬಂದಿಲ್ಲ. 24 ಸಕ್ಕರೆ ಕಾರ್ಖಾನೆಗಳಿಂದ 381.72 ಕೋಟಿ ರೂಪಾಯಿ ಹಣ ಬಾಕಿ ಇದೆ ಎಂದು ತಿಳಿಸಿದರು.

ರೈತರಿಗೆ ಸಕ್ಕರೆ ಬಾಕಿ ಬರಬೇಕು: ಸಭೆಯ ನಂತರ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕಬ್ಬಿಗೆ ಯುಪಿಯಲ್ಲಿ ಟನ್ ಗೆ 3,000 ರೂ. ಕೊಡಲಾಗುತ್ತದೆ. ಸಕ್ಕರೆ ಸಚಿವರು ಸಿಎಂ ಜೊತೆ ಚರ್ಚಿಸುವುದಾಗಿ‌ ಹೇಳಿದ್ದಾರೆ. ಪ್ರಸಕ್ತ ಸಾಲಿಗೆ ಟನ್‌ ಕಬ್ಬಿಗೆ 3,500 ದರ ನಿಗದಿಯಾಗಬೇಕು. ರಸಗೊಬ್ಬರ ಬೆಲೆ, ಡೀಸೆಲ್, ಕಟಾವು ಕೂಲಿ, ಸಾಗಣಿಕ ವೆಚ್ಚ ಏರಿಕೆಯಾಗಿರುವ ಕಾರಣ ನ್ಯಾಯಯುತ ಬೆಲೆ ನಿಗದಿಯಾಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್​ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ

ಎಥೆನಾಲ್ ಲಾಭ ರೈತರಿಗೆ ಸಿಗಬೇಕು: ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್ ಲಾಭ ರೈತರಿಗೆ ಹಂಚಿಕೆಯಾಗಬೇಕು. ಈ ಬಗ್ಗೆ ಕಾನೂನು ರೂಪಿಸಬೇಕು. ಯಾವುದೇ ಸಕ್ಕರೆ ಕಾರ್ಖಾನೆ 14 ದಿನಕ್ಕಿಂತ ಹೆಚ್ಚು ವಿಳಂಬವಾಗಿ ಹಣ ಪಾವತಿ ಮಾಡುವಾಗ ಕನಿಷ್ಠ 15% ಬಡ್ಡಿ ಸೇರಿಸಿ ಕೊಡುವಂತೆ ಆಗ್ರಹಿಸಿದ್ದೇವೆ. ನಿಯಮ ಉಲ್ಲಂಘಿಸುವ ಕಾರ್ಖಾನೆಗಳಿಗೆ ಕಬ್ಬು ಅರೆಯುವ ರಹದಾರಿ ನವೀಕರಣ ಮಾಡಬಾರದು. ಕಟ್ಟು ಬಿತ್ತನೆ ಕಾರ್ಖಾನೆ ಜೊತೆ ಒಪ್ಪಂದ ಕರಾರು, ಕಬ್ಬು ಕಟಾವು ಅನುಮತಿ ಸೂಚನೆ, ಕಬ್ಬಿನ ತೂಕ, ತೂಕದ ವಿವರ ಬಿಲ್, ಹಣ ಪಾವತಿ ಸಂಪೂರ್ಣವಾಗಿ ಡಿಜಿಟಲೀಕರಣ ವಾಗಬೇಕೆಂದು ಆಗ್ರಹಿಸಿದ್ದೇವೆ ಎಂದರು.

ವಿಮೆ ಜಾರಿಗೆ ಆಗ್ರಹ: ಹಿಂದಿನ ಸಾಲಿನ ಕಟ್ಟು ಹಣ ಬಾಕಿ ಕೂಡಲೇ ಬಡ್ಡಿ ಸಮೇತ ಪಾವತಿಸುವ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗೆ ಬೆಳೆ ವಿಮೆ ಜಾರಿ ತರಲು ಕೃಷಿ ಇಲಾಖೆ ಜೊತೆ ಚರ್ಚಿಸಿ ಕ್ರಮಕೈಗೊಳಬೇಕು. ಆಕಸ್ಮಿಕ ಬೆಂಕಿ, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿ ಹಾನಿ, ಬೆಳೆ ನಷ್ಟ ಪರಿಹಾರ ವೈಜ್ಞಾನಿಕವಾಗಿ ನಿಗದಿಯಾಗಬೇಕು. ಬೆಂಕಿ ಬಿದ್ದು ಸುಟ್ಟು ಹೋದ ಕಬ್ಬಿಗೆ, ಕಾರ್ಖಾನೆಗಳು ಅವೈಜ್ಞಾನಿಕವಾಗಿ ಶೇ. 25ರಷ್ಟು ಹಣ ರೈತರಿಂದ ಕಡಿತ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ 40 ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ಎಥೆನಾಲ್ ಹಣ ರೈತರಿಗೆ ನೀಡುವ ಬಗ್ಗೆ ಒತ್ತಾಯಿಸಿದ್ದೇವೆ ಎಂದು ಸಚಿವರು ಹೇಳಿದರು.

ಯಾವೆಲ್ಲಾ ಕಾರ್ಖಾನೆಗಳಿಂದ ಬಿಲ್ ಬಾಕಿ..?

ಮಾರ್ಕಾಂಡೇಯ ಎಸ್ ಎಸ್ ಕೆ, ಬೆಳಗಾವಿ- 25.65 ಕೋಟಿ ರೂ.

ಮಲಪ್ರಭಾ ಎಸ್ ಎಸ್ ಕೆ, ಬೆಳಗಾವಿ- 21.25 ಕೋಟಿ ರೂ.

ಶ್ರೀ ಬಸವೇಶ್ವರ ಶುಗರ್ಸ್, ವಿಜಯಪುರ- 39.10 ಕೋಟಿ ರೂ.

ಉಗಾರ್ ಶುಗರ್ಸ್, ಕಲಬುರಗಿ- 23.69 ಕೋಟಿ ರೂ.

ಉಗಾರ್ ಶುಗರ್ಸ್, ಬೆಳಗಾವಿ- 42.66 ಕೋಟಿ ರೂ.

ಗೋದಾವರಿ ಶುಗರ್ಸ್, ಬಾಗಲಕೋಟೆ- 38.38 ಕೋಟಿ ರೂ.

ನಿರಾಣಿ ಶುಗರ್ಸ್, ಬಾಗಲಕೋಟೆ- 29.90 ಕೋಟಿ ರೂ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.