ಬೆಂಗಳೂರು: ಮಹಿಳೆ ಮೇಲೆ ಜೊಮ್ಯಾಟೊ ಕಂಪೆನಿಯ ಪುಡ್ ಡೆಲಿವರಿ ಬಾಯ್ ನಡೆಸಿದ ಹಲ್ಲೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಡೆಲಿವರಿ ಬಾಯ್ ಮೇಲೆ ಅನುಕಂಪದ ಕುರಿತಂತೆ ಟ್ವೀಟರ್ನಲ್ಲಿ ಟ್ರೆಂಡಿಂಗ್ ಆಗಿದೆ. #zomatodeliveryboy ಹೆಸರಿನಲ್ಲಿ ಯುವಕ ಕಾಮರಾಜ್ ಪರವಾಗಿ 3558 ಟ್ವೀಟ್ ಗಳು ಬಂದಿವೆ. ಹಲ್ಲೆ ಮಾಡಿರುವುದಾಗಿ ಹಿತೇಶಾ ಚಂದ್ರಾಣಿ ಎಂಬುವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹರಿಬಿಟ್ಟು ಆಳಲು ತೋಡಿಕೊಂಡಿದ್ದರು. ಇದು ಎಲ್ಲೆಡೆ ಚರ್ಚೆಯಾಗಿತ್ತು.. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಟ್ವೀಟಿಗರು ನಿಜವಾದ ಸಂತ್ರಸ್ತೆ ಯಾರು ? ಎಂದು ಪ್ರಶ್ನೆ ಮಾಡಿ ಹಿತೇಶಾ ವಿರುದ್ಧ ಮೆಮ್ ಗಳನ್ನು ಹರಿಬಿಟ್ಟು ಟ್ರೋಲ್ ಮಾಡಿದ್ದಾರೆ.
ಬಂಧನ ಬಳಿಕ ಕಾಮರಾಜ್ ಹೇಳಿದ್ದೇನು ?
ಮಹಿಳೆಯಿಂದ ಆರ್ಡರ್ ಪಡೆದು ಆಹಾರ ನೀಡಲು ಆಕೆ ಮನೆಗೆ 45-50 ನಿಮಿಷ ತಡವಾಗಿ ಹೋಗಿದ್ದೆ. ದಾರಿ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಟ್ರಾಫಿಕ್ ಜಾಮ್ನಿಂದ ಸಕಾಲಕ್ಕೆ ಪುಡ್ ಡೆಲಿವರಿ ಮಾಡಲು ಸಾಧ್ಯವಾಗಿಲ್ಲ. ವಿಳಂಬವಾಗಿರುವ ಬಗ್ಗೆ ಕ್ಷಮಾಪಣೆ ಕೇಳಿದ್ದೆ. ಕೋಪದಲ್ಲಿದ್ದ ಆಕೆ ನನ್ನ ವಿರುದ್ಧ ಕೂಗಾಡಲು ಶುರು ಮಾಡಿದ್ದರು. ಮತ್ತೆ ಕ್ಷಮೆ ಕೋರಿದರೂ ಬೈಯುವುದನ್ನು ನಿಲ್ಲಿಸಲಿರಲಿಲ್ಲ. ಜೋರು ಮಾತನಾಡಿ ನನ್ನ ಬಳಿಯಿದ್ದ ಊಟದ ಪಾರ್ಸೆಲ್ ತೆಗೆದುಕೊಂಡರು. ಬಿಲ್ ಕೇಳಿದಕ್ಕೆ ಕೊಡುವುದಿಲ್ಲ ಎಂದರು.
ಯುವತಿಯ ಮುಖಕ್ಕೆ ಪಂಚ್ ಮಾಡಿದ ಜೊಮ್ಯಾಟೊ ಡೆಲಿವರಿ ಬಾಯ್; ದೂರು ದಾಖಲು
ಅಷ್ಟರಲ್ಲಿ ಜೊಮ್ಯಾಟೊ ಕಂಪೆನಿಯವರು ಆರ್ಡರ್ ರದ್ದು ಮಾಡಿರುವ ವಿಷಯ ಗೊತ್ತಾಯಿತು. ಹಣ ನೀಡಲು ಒಪ್ಪದ ಕಾರಣ ಊಟ ತೆಗೆದುಕೊಳ್ಳಲು ಮುಂದಾದೆ. ಆದರೆ ಅದಕ್ಕೂ ಆಕೆ ನಿರಾಕರಿಸಿ ಹಿಂದಿಯಲ್ಲಿ ಮತ್ತೆ ಬೈಯ್ದು ಕೂಗಲಾರಂಭಿಸಿದ್ದರು ಎಂದು ಕಾಮರಾಜ್ ಹೇಳಿದ್ದಾನೆ.
ಮಹಿಳೆ ಮುಖಕ್ಕೆ ಪಂಚ್ ಮಾಡಿದ ಜೊಮ್ಯಾಟೊ ಪುಡ್ ಡೆಲಿವರಿ ಬಾಯ್ ಅರೆಸ್ಟ್
ನಾನು ಎರಡು ವರ್ಷಗಳಿಂದ ಜೊಮ್ಯಾಟೊ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಗ್ರಾಹಕರನ್ನು ಎಂದಿಗೂ ನೋಡಿರಲಿಲ್ಲ. ಮಹಿಳೆ ಹಣ ನೀಡುವುದಿಲ್ಲ ಎಂದು ಮನವರಿಕೆ ಮಾಡಿಕೊಂಡು ಲಿಫ್ಟ್ ಹತ್ತಿರ ಹೋದೆ . ಆ ವೇಳೆ ಆಕೆ ನನ್ನ ಮೇಲೆ ಚಪ್ಪಲಿ ಎಸೆದರು. ಈ ವೇಳೆ ಕೈ ಅಡ್ಡ ಹಿಡಿದರೂ ನನ್ನ ಕೈ ತೆಗೆದು ಹೊಡೆಯಲು ಬಂದರು. ಆಗ ನಾನು ನನ್ನನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ಆಕೆ ಹಾಕಿಕೊಂಡಿದ್ದ ಉಂಗುರು ಆಕೆಯ ಮೂಗಿಗೆ ತಾಕಿ ಗಾಯ ಮಾಡಿಕೊಂಡರು.
ಆ ಪೋಟೊ ನೋಡಿದರೆ ಪಂಚ್ ನಿಂದ ಆದ ಗಾಯವಲ್ಲ ಅನಿಸುತ್ತದೆ. ಅಲ್ಲದೆ ನಾನು ಉಂಗುರವನ್ನೇ ತೊಡುವುದಿಲ್ಲ.. ಲಿಫ್ಟ್ ಮೂಲಕ ಹೋಗಲು ಬಿಡದ ಮಹಿಳೆಯಿಂದ ತಪ್ಪಿಸಿಕೊಂಡು ನಾನು ಮೆಟ್ಟಿಲಿನಿಂದ ಓಡಿಬಂದೆ. ಆಕೆ ನನ್ನ ಮೇಲೆ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.