ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 3495 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಇದುವರೆಗಿಂತ ಅತೀ ಹೆಚ್ಚಿನ ಪ್ರಕರಣಗಳು ಇಂದು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 34,860 ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 35 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಇಂದು ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್ನಿಂದ ಸುಮಾರು 2034 ಮಂದಿ ಬಿಡುಗಡೆಯಾಗಿದ್ದು, ಚೇತರಿಕೆ ಪ್ರಮಾಣ ಶೇಕಡಾ 58.65 ಇದೆ.