ETV Bharat / state

ಪ್ರವಾಸೋದ್ಯಮದಲ್ಲಿ 300 ಕೋಟಿ ರೂ ಬಂಡವಾಳ ಹೂಡಿಕೆಗೆ ಅನುಮೋದನೆ: ಸಚಿವ ಎಚ್ ಕೆ ಪಾಟೀಲ್ - ಪಂಜಾಬ್ ಪ್ರವಾಸೋದ್ಯಮ ಇಲಾಖೆ

ಬೆಂಗಳೂರಿನಲ್ಲಿ ಮೂರು ದಿನ ಕಾಲ ನಡೆಯಲಿರುವ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ಪ್ರವಾಸೋದ್ಯಮ ಮೇಳಕ್ಕೆ ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಿದರು. ಮೇಳದಲ್ಲಿ ದೇಶದ 22 ರಾಜ್ಯದ ಪ್ರತಿನಿಧಿಗಳು ಭಾಗವಹಿಸಿದ್ದರು.

Minister HK Patil inaugurated the tourism fair
ಪ್ರವಾಸೋದ್ಯಮ ಮೇಳಕ್ಕೆ ಸಚಿವ ಎಚ್ ಕೆ ಪಾಟೀಲ್ ಚಾಲನೆ ನೀಡಿದರು.
author img

By

Published : Jul 28, 2023, 5:59 PM IST

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರ ಸಮಿತಿಯು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 300 ಕೋಟಿಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.

ಅವರು ಶುಕ್ರವಾರ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಆರಂಭವಾದ ಮೂರು ದಿನಗಳ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ಪ್ರವಾಸೋದ್ಯಮ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಹೂಡಿಕೆಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು ಕೆಳವರ್ಗದ ಜನರೂ ಇದರ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳುತ್ತಿದೆ ಎಂದು ತಿಳಿಸಿದರು.

Minister discussed with the delegates.
ವಿವಿಧ ಪ್ರತಿನಿಧಿಗಳೊಂದಿಗೆ ಸಚಿವರು ಚರ್ಚಿಸಿ ಮಾಹಿತಿ ಪಡೆದರು.

ಭಾರತದ ಪ್ರವಾಸಕ್ಕೆ ವಿದೇಶಿಗರ ಸಂಖ್ಯೆ ಹಚ್ಚಳ: ಸ್ಫಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ರೋಹಿತ್ ಹಂಗಲ್ ಮಾತನಾಡಿ, ಪ್ರಸ್ತುತ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ವಿದೇಶಗಳಿಂದ ಭಾರತಕ್ಕೆ ಭೇಟಿ ನೀಡುವವರ ಸಂಖ್ಯೆ ಕ್ರಮೇಣವಾಗಿ ಹಚ್ಚುತ್ತಿದೆ. 'ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್' ದೇಶಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲತುಂಬುವ ಕಾರ್ಯಕ್ರಮವಾಗಿದೆ.

ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಹಿಮಾಚಲಪ್ರದೇಶ, ಕೇರಳ, ಉತ್ತರಾಖಂಡ, ಉತ್ತರ ಪ್ರದೇಶದ ಪ್ರವಾಸೋದ್ಯಮ ಪಾಲುದಾರರು ತಮ್ಮ ಉದ್ಯಮದ ಅಭಿವೃದ್ಧಿಗಾಗಿ ಅತ್ಯಂತ ಉತ್ಸುಕರಾಗಿ ಪ್ರದರ್ಶನದಲ್ಲಿ ಭಾಗಿಯಾಗುವುದನ್ನು ನಾವು ಕಾಣಬಹುದು. ತೀರ್ಥಯಾತ್ರೆ, ಸಾಹಸ, ಕುಟುಂಬ ಸದಸ್ಯರೊಂದಿಗೆ ಪ್ರವಾಸ ಮತ್ತು ಹನಿಮೂನ್‌ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ಯಾಕೇಜ್‌ಗಳನ್ನು ಹುಡುಕುತ್ತಿರುವವರಿಗೆ ಅಥವಾ ತಮ್ಮ ಕಂಪನಿಯ ಕಾನ್ಫರೆನ್ಸ್ ಗಳಿಗೆ ಸ್ಥಳಗಳನ್ನು ಹುಡುಕುತ್ತಿರುವವರಿಗೆ ಈ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.

ಪಂಜಾಬ್ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕಿ ಗುಪ್ತ ಭಂಡಾರಿ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ಸಾಹು ಇನ್ನಿತರರು ಉಪಸ್ಥಿತರಿದ್ದರು.

ಇಂಡಿಯಾ ಇಂಟರ್‌ನ್ಯಾಶನಲ್ ಟ್ರಾವೆಲ್ ಮಾರ್ಟ್: ಮುಂಚೂಣಿಯ ಟ್ರಾವೆಲ್ ಮೀಡಿಯಾ ಕಂಪನಿ, ಸ್ಪಿಯರ್ ಟ್ರಾವೆಲ್ ಮೀಡಿಯಾ 'ಇಂಡಿಯಾ ಇಂಟರ್‌ನ್ಯಾಶನಲ್ ಟ್ರಾವೆಲ್ ಮಾರ್ಟ್ (ಐಐಟಿಎಂ) ಆಯೋಜಿಸಿದ್ದು, ಐಐಟಿಎಂ- ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ, ವಿರಾಮ ಮತ್ತು ಇತರ ಸಂಬಂಧಿತ ಉದ್ಯಮಗಳನ್ನು ಒಂದೇ ಸೂರಿನಡಿ ತರುತ್ತದೆ. ಉದ್ಯಮ, ಪ್ರಯಾಣ, ಪ್ರವಾಸೋದ್ಯಮ, ಕಾರ್ಪೊರೇಟ್ ಖರೀದಿದಾರರು ಮತ್ತು ಗ್ರಾಹಕರ ಪರಸ್ಪರ ಭೇಟಿಗೆ ಇದು ವೇದಿಕೆ ಕಲ್ಪಿಸಿದೆ. ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಟ್ರಾವೆಲ್ ಏಜೆಂಟರು ಹಾಗೂ ಟೂರ್ ಆಪರೇಟರ್‌ಗಳು, ಡಿಎಂಸಿ, ಹೋಟೆಲ್‌- ರೆಸಾರ್ಟ್‌, ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ, ತಂತ್ರಜ್ಞಾನ ವೇದಿಕೆ, ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕಳೆದ 23 ವರ್ಷಗಳಿಂದ ಮೇಳ ಆಯೋಜಿಸಲಾಗುತ್ತಿದ್ದು, ಈ ಬಾರಿಯ ಮೇಳದಲ್ಲಿ ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಬಿಹಾರ, ಉತ್ತರಪ್ರದೇಶ, ಪಂಜಾಬ್, ತಮಿಳುನಾಡು, ಛತ್ತೀಸ್‌ಗಢ, ಸೇರಿದಂತೆ 22 ರಾಜ್ಯಗಳು ಭಾಗವಹಿಸಿವೆ. ಮಲೇಷ್ಯಾ, ವಿಯೆಟ್ನಾಂ, ಥಾಯ್ಲೆಂಡ್​, ಯುರೋಪ್, ನೇಪಾಳ, ದುಬೈ, ಟರ್ಕಿ, ಸಿಂಗಾಪುರ್, ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

15 ಅಂತಾರಾಷ್ಟ್ರೀಯ ಸ್ಥಳಗಳು ಹಾಗೂ ವಿವಿಧ ರಾಜ್ಯಗಳ 20ಕ್ಕೂ ಹೆಚ್ಚು ಪ್ರವಾಸೋದ್ಯಮ ಸಂಸ್ಥೆಗಳು 400ಕ್ಕೂ ಹೆಚ್ಚು ಪ್ರದರ್ಶಕರೊಂದಿಗೆ, ಐಐಟಿಎಂ, ತೀರ್ಥಕ್ಷೇತ್ರ, ಸಾಹಸ, ಸಂಸ್ಕೃತಿ ಮತ್ತು ಪರಂಪರೆ, ಕಡಲ ತೀರಗಳು, ವನ್ಯಜೀವಿ, ಗಿರಿಧಾಮ ಮುಂತಾದ ಆಕರ್ಷಕ ತಾಣಗಳ ಬಗ್ಗೆ ಪ್ರಚುರಪಡಿಸುತ್ತಿದೆ.

ಒಂದು ಕೊಂಬಿನ ಭಾರತೀಯ ಘೇಂಡಾಮೃಗವಿರುವ ತಾಣಗಳಿಂದ ಹಿಡಿದು ರಾಜಸ್ಥಾನದ ಮರುಭೂಮಿ ಉತ್ಸವ, ಕರ್ನಾಟಕದ ಯುನೆಸ್ಕೋ ವಿಶ್ವಪರಂಪರೆಯ ತಾಣಗಳವರೆಗೆ ಹಲವಾರು ಪ್ರವಾಸದ ಆಯ್ಕೆಗಳನ್ನು ಮುಂದಿಟ್ಟಿವೆ. ಪ್ರದರ್ಶನದ ವೇಳೆ ಪರಿಚಯಿಸುವ ಇಂಥ ವೈವಿಧ್ಯಮಯ ಆಕರ್ಷಕ ತಾಣಗಳು ಪ್ರವಾಸಿಗರ ಮನ ಸೆಳೆಯುತ್ತಿದೆ.

ಪ್ರವಾಸೋದ್ಯಮದ ಮಟ್ಟಿಗೆ ಈ ಕಾರ್ಯಕ್ರಮವು ಅತ್ಯಂತ ಪ್ರಮುಖವಾಗಿದೆ. ಈ ಪ್ರವಾಸೋದ್ಯಮ ಪ್ರದರ್ಶನದ ಮೂಲಕ ಕರ್ನಾಟಕದ ಪುರಾತತ್ತ್ವ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸಲಾಗುತ್ತದೆ. ಮುಂಬರುವ ಮೈಸೂರು ದಸರಾ ಉತ್ಸವಕ್ಕೂ ಈ ಕಾರ್ಯಕ್ರಮ ದೊಡ್ಡಮಟ್ಟದ ಪ್ರಚಾರ ಒದಗಿಸಲಿದೆ...

ಇದನ್ನೂಓದಿ: ಆಗಸ್ಟ್​ ತಿಂಗಳಲ್ಲಿ ನಿಮ್ಮ ಆರ್ಥಿಕ ವ್ಯವಹಾರದಲ್ಲಿ ಏನೆಲ್ಲಾ ಬದಲಾವಣೆ.. ಯಾವೆಲ್ಲ ಹೊಸ ನಿಯಮ.. ಇಲ್ಲಿವೆ ಅಪ್​ಡೇಟ್ಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.