ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದ ಮೂರು ಸಿಂಹಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ಬೆಳಗಾವಿಯ ಭೂತರಾಮನಹಟ್ಟಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
ಗಣೇಶ ಮತ್ತು ಪ್ರೇಕ್ಷಾ ಜೋಡಿಗೆ 2010ರಲ್ಲಿ ಜನಿಸಿದ್ದ ನಿರುಪಮ, ಕೃಷ್ಣ ಮತ್ತು ನಕುಲ ಎಂಬ 11 ವರ್ಷದ ಸಿಂಹಗಳನ್ನು ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ನೀಡಲಾಗಿದೆ.
ಇದನ್ನು ಓದಿ: ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲಿ ಸ್ತಬ್ಧವಾಗಲಿವೆ 6 ಲಕ್ಷಕ್ಕೂ ಹೆಚ್ಚು ಲಾರಿಗಳು!
ಹೊಸದಾಗಿ ಪ್ರಾರಂಭವಾಗಿರುವ ಈ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಸಿಂಹಗಳನ್ನು ನೀಡಿರುವುದು ವಿಶೇಷ. ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಪಡೆದು ಈ ಸಿಂಹಗಳನ್ನು ನೀಡಲಾಗಿದೆ.