ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಂಡ ಪ್ರಮಾಣ ಹೆಚ್ಚಿಸಿದ್ದರೂ ವಾಹನ ಸವಾರರು ಮಾತ್ರ ಸಂಚಾರಿ ನಿಯಮ ಉಲ್ಲಂಘಿಸುವುದನ್ನು ಮುಂದುವರೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಂಚಾರಿ ಪೊಲೀಸರು ಕಳೆದ ಒಂದು ವಾರದಲ್ಲಿ 3 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ: ಊಟಕ್ಕೂ ಹಣವಿಲ್ಲ, ಫೈನ್ ಹೇಗೆ ಕಟ್ಟಲಿ?: ಪೊಲೀಸರೊಂದಿಗೆ ಬೈಕ್ ಸವಾರನ ಕಿರಿಕ್
ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ವಾಹನ, ಸಿಗ್ನಲ್ ಜಂಪ್ ಸೇರಿದಂತೆ ನ. 23ರಿಂದ 29ರವರೆಗೆ ಏಳು ದಿನಗಳ ಅಂತರದಲ್ಲಿ ನಗರದಲ್ಲಿ 79,359 ಪ್ರಕರಣಗಳು ದಾಖಲಾಗಿವೆ. ಇದರಿಂದ 3.34 ಕೋಟಿಗಿಂತ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯನ್ನು ಹೆಚ್ಚಾಗಿ ಬೈಕ್ ಸವಾರರೇ ಮಾಡುತ್ತಿರುವುದು ಕಂಡು ಬಂದಿದೆ. ಕಳೆದ ಅಕ್ಟೋಬರ್ವಲ್ಲಿ 18 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿತ್ತು.