ಬೆಂಗಳೂರು: ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್ಗೆ ವಿಧಾನಸಭೆಯಲ್ಲಿ ಇಂದು ಒಪ್ಪಿಗೆ ನೀಡಲಾಯಿತು.
ಹಿಂದಿನ ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್‌ನ ಮುಂದುವರಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಕರ್ನಾಟಕ ಧನ ವಿನಿಯೋಗ ವಿಧೇಯಕ-2019ನ್ನು ಮಂಡಿಸಿದರು.
ಹಿಂದೆ ನಾಲ್ಕು ತಿಂಗಳಿಗೆ ನಂತರ ಏಳು ತಿಂಗಳ ಅವಧಿಗೆ ಲೇಖಾನುದಾನ ಪಡೆಯಲಾಗಿತ್ತು. ಈಗ ಪೂರ್ಣ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ( 2020ರ ಏಪ್ರಿಲ್ 1ರವರೆಗೆ ಪೂರ್ವಾನ್ವಯವಾಗುವಂತೆ ನಾಲ್ಕು ತಿಂಗಳಿಗೆ) ಮಂಡಿಸಲಾಗಿದೆ.
ಈ ವಿಧೇಯಕಕ್ಕೆ ಧ್ವನಿ ಮತದ ಮೂಲಕ ಸದನ ಒಪ್ಪಿಗೆ ನೀಡಿತು. ಆ ಮೂಲಕ 2,40,745 ಕೋಟಿ ರೂ.ಬಜೆಟ್ ಲೇಖಾನುದಾನಕ್ಕೆ ಸದನ ಒಪ್ಪಿಗೆ ನೀಡಿದೆ.