ETV Bharat / state

ಇಂದ್ರಜಿತ್ ಲಂಕೇಶ್ ಲಿಸ್ಟ್​ನ​​ಲ್ಲಿದ್ದಾರಂತೆ 20 ಮಂದಿ: ಇಂದೇ ಬಾಯ್ಬಿಡ್ತಾರಾ ನಿರ್ದೇಶಕ!? - ಇಂದ್ರಜಿತ್ ಲಂಕೇಶ್

ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಳಿ 20 ಜನರ ಲಿಸ್ಟ್​ ಇದೆ ಎನ್ನಲಾಗಿದ್ದು, ಯಾರು ಆ 20 ಮಂದಿ ಎಂಬ ಪ್ರಶ್ನೆ ಕಾಡತೊಡಗಿದೆ.

Indrajit Lankesh
ಇಂದ್ರಜಿತ್ ಲಂಕೇಶ್
author img

By

Published : Aug 31, 2020, 1:19 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ ಬಗ್ಗೆ ಹೇಳಿಕೆ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ಆಗಮಿಸಿದ್ದು, ಸದ್ಯ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಬಳಿ ಸುಮಾರು 20 ಜನ ನಟ, ನಟಿಯರು, ಸಂಗೀತಗಾರರು, ನಿರ್ದೇಶಕರ ಹೆಸರಿದೆಯಂತೆ. ಅವುಗಳನ್ನು ಬಹಿರಂಗಪಡಿಸುತ್ತಾರಾ? ಎಂಬುದು ಕುತೂಹಲ ಕೆರಳಿಸಿದೆ. ಲಾಯರ್ ಜೊತೆಗೆ ಲ್ಯಾಪ್​ಟಾಪ್ ತೆಗೆದುಕೊಂಡು ಬಂದಿರುವ ಇಂದ್ರಜಿತ್ ವಿಚಾರಣೆಗೆ ಹಾಜರಾಗಿದ್ದಾರೆ.

ಯಾರು ಆ 20 ಜನ?

ಸದ್ಯ ಇಂದ್ರಜಿತ್ ಅವರ ಬಳಿ ಇರುವ ಆ 20 ಜನರ ಲಿಸ್ಟ್​​ನಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಹೆಸರು ಬಹಿರಂಗವಾದ ನಂತರ ಸ್ಯಾಂಡಲ್‌ವುಡ್​​ನಲ್ಲಿ ಭಾರೀ ಬಿರುಗಾಳಿ ಏಳಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಲ್ಯಾಪ್​​ಟಾಪ್ ಜೊತೆಗೆ ಇಂದ್ರಜಿತ್​ ಲಿಸ್ಟ್ ಕೂಡ ತಂದಿದ್ದಾರೆ ಎನ್ನಲಾಗಿದ್ದು, ಸಿಸಿಬಿ ಎಸಿಪಿ ಗೌತಮ್ ಕುಮಾರ್ ಹಾಗೂ ಇನ್ಸ್​ಪೆಕ್ಟರ್ ಮಾಲ್ತೇಶ್ ಬೊಳೆತ್ತಿನ್ ಮುಂದೆ ಹೇಳಿಕೆ ನಿಡುತ್ತಿದ್ದಾರೆ‌.

ಸದ್ಯ ಸ್ಯಾಂಡಲ್​ವುಡ್ ಚಿತ್ತ ಸಿಸಿಬಿಯತ್ತ ನೆಟ್ಟಿದೆ. ಮತ್ತೊಂದೆಡೆ ನಿರ್ದೇಶಕ ಇಂದ್ರಜಿತ್ ಅವರಿಗೆ ಪ್ರಭಾವಿ ರಾಜಾಕಾರಣಿಗಳ ಒತ್ತಡ ಕೂಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.