ETV Bharat / state

ರಾಜ್ಯದಲ್ಲಿಂದು 1,869 ಮಂದಿಗೆ ಸೋಂಕು ದೃಢ : 42 ಬಲಿ - ಕರ್ನಾಟಕ ರಾಜ್ಯದಲ್ಲಿಂದು 1869 ಮಂದಿಗೆ ಕೊರೊನಾ ಸೋಂಕು ದೃಢ

ರಾಜ್ಯದಲ್ಲಿ ಜಾಗತಿಕ ಪಿಡುಗು ಕೋವಿಡ್ ಪ್ರಭಾವ ದಿನೇ ದಿನೆ ಕಡಿಮೆಯಾಗುತ್ತಿದೆ. ಆದ್ರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುವಂತಿಲ್ಲ. ಕೋವಿಡ್‌ ಹೊಸ ರೂಪಾಂತರಿಗಳು ಇನ್ನೂ ಜನರನ್ನು ದುಸ್ವಪ್ನದಂತೆ ಕಾಡುತ್ತಿವೆ. ನೆರೆಯ ರಾಜ್ಯ ಕೇರಳದಲ್ಲಿ ಮಾರಕ ರೋಗ ಮತ್ತೆ ಅಲ್ಲಿನ ಜನರ ನಿದ್ದೆಗೆಡಿಸಿದೆ. ಈ ಮಧ್ಯೆ ನಮ್ಮ ರಾಜ್ಯದಲ್ಲಿ ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಕರ್ನಾಟಕ ಕೋವಿಡ್​ ಬುಲೆಟಿನ್
ಕರ್ನಾಟಕ ಕೋವಿಡ್​ ಬುಲೆಟಿನ್
author img

By

Published : Jul 17, 2021, 7:07 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 1,869 ಮಂದಿಗೆ ಹೊಸದಾಗಿ ಕೋವಿಡ್‌-19 ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,82,239 ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.30ರಷ್ಟಿದೆ.

ಇನ್ನು, 3,144 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳಿಗೆ ಹೋಲಿಕೆ ಮಾಡಿದ್ರೆ, ಸೋಂಕಿತರ ಸಂಖ್ಯೆ ಕಡಿಮೆ ಇದೆ. ಈತನಕ‌ 28,16,013 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಸದ್ಯ 30,082 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ. ಮಾರಕ ರೋಗಕ್ಕೆ ಇಂದು 42 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗಿನ ಸಾವಿನ ಸಂಖ್ಯೆ 36,121 ತಲುಪಿದೆ. ಸಾವಿನ‌ ಶೇಕಡಾವಾರು ಪ್ರಮಾಣ ಮತ್ತೆ ಶೇ.2.24ರಷ್ಟಿದೆ. 16 ಜಿಲ್ಲೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಇದನ್ನೂ ಓದಿ : ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್​​​ಗೆ ದರ್ಶನ್ ಸವಾಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.