ETV Bharat / state

ನಾಳೆಯಿಂದ ಅಗತ್ಯ ವಸ್ತುಗಳ ಪೂರೈಕೆಗೆ ಬಿಎಂಟಿಸಿ ಬಸ್​ಗಳ‌ ಬಳಕೆ! - ನಾಳೆಯಿಂದ ಬಿಎಂಟಿಸಿ ಬಸ್​ಗಳ‌ ಸಂಚಾರಕ್ಕೆ ವ್ಯವಸ್ಥೆ

ಲಾಕ್​ಡೌನ್​ ನಡುವೆಯೂ ನಾಳೆಯಿಂದ ಬಿಎಂಟಿಸಿ 1,200 ಬಸ್​​ಗಳು ರಸ್ತೆಗೆ ಇಳಿಯಲಿವೆ.

BMTC   buses running   from tomorrow
ನಾಳೆಯಿಂದ ಬೆಂಗಳೂರಿನಾದ್ಯಂತ 180 ಬಸ್​ಗಳ‌ ಸಂಚಾರಕ್ಕೆ ವ್ಯವಸ್ಥೆ
author img

By

Published : Mar 25, 2020, 11:16 PM IST

ಬೆಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲಾ ಸೇವೆಗಳಿಗೂ ಬ್ರೇಕ್ ಹಾಕಲಾಗಿದೆ. ಈ ಮಧ್ಯೆ ನಾಳೆಯಿಂದ ಬಿಎಂಟಿಸಿಯಿಂದ 1,200 ಬಸ್​ಗಳು ರಸ್ತೆಗೆ ಇಳಿಯಲಿವೆ.

ಬಿಎಂಟಿಸಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ದಿನ ಬಳಕೆ ವಸ್ತುಗಳ ಪೂರೈಕೆ ಹಾಗೂ ತುರ್ತು ಆರೋಗ್ಯ ಸೇವೆಗಳಿಗೆ ಮಾತ್ರ ಬಸ್ ಬಳಕೆ ಸೀಮಿತವಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಬಸ್​​ಗಳನ್ನು ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.‌ ಸರ್ಕಾರಿ ನೌಕರರು, ವೈದ್ಯರು, ಫಾರ್ಮಸಿ, ಬೆಸ್ಕಾಂ, ಬಿಡ್ಲೂಎಸ್​​ಎಸ್​​ಬಿ ಸೇರಿದಂತೆ ಅಗತ್ಯ ಇದ್ದ ಕಡೆ ಮಾತ್ರ ಬಸ್​ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ಇಲಾಖೆಯ ನೌಕರರು ತುರ್ತು ಆರೋಗ್ಯ ಸೇವೆಗೆ ಓಡಾಲು ಆಫೀಸ್​ನ ಎಂಪ್ಲಾಯ್ ಐಡಿ‌ ತೋರಿಸಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.