ETV Bharat / state

ಮಾರ್ಚ್ 23ರಂದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.. ಸಿಎಂರಿಂದ ಉದ್ಘಾಟನೆ - ಯಶವಂತಪುರ ಒರಾಯನ್‌ಮಾಲ್​

ವಿಧಾನಸೌಧದ ಮುಂಭಾಗದಲ್ಲಿ ಮಾರ್ಚ್​ 23ರಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಲಾಗುತ್ತೆ ಎಂಬುದು ತಿಳಿದು ಬಂದಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
author img

By

Published : Mar 14, 2023, 10:28 PM IST

ಬೆಂಗಳೂರು : ಪ್ರತಿವರ್ಷದಂತೆ ಈ ವರ್ಷವೂ 14ನೇ ಬೆಂಗಳೂರು ಅಂತಾರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.‌ ಈ ನಿಟ್ಟಿನಲ್ಲಿ ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತಯಾರಿ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಆಸ್ಕರ್​​ ಗೆದ್ದ ನಾಟು ನಾಟು: ಗೀತೆ ರಚನೆಕಾರ ಚಂದ್ರಬೋಸ್ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ

ರಾಜ್ಯಪಾಲರದ ಶ್ರೀ ಥಾವರ್ ಚಂದ್ ಅಧ್ಯಕ್ಷತೆ : ಮಾರ್ಚ್ 23ರಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾಡಲಾಗುತ್ತೆ ಎಂಬುದು ತಿಳಿದುಬಂದಿದೆ. ಅಲ್ಲದೇ, ಈ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡುತ್ತಾರೆ. ಈ‌ ಸಮಯದಲ್ಲಿ ರಾಜ್ಯಪಾಲರದ ಶ್ರೀ ಥಾವರ್ ಚಂದ್ ಅಧ್ಯಕ್ಷತೆ ವಹಿಸುತ್ತಾರೆ. ಅಂದು ಏಷ್ಯನ್ ಹಾಗೂ ಭಾರತೀಯ ಹಾಗು ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ : ಅಧಿಕಾರಕ್ಕಾಗಿ ಅಲ್ಲ, ಜನಕಲ್ಯಾಣಕ್ಕಾಗಿ ರಾಜಕಾರಣ ಮಾಡುವೆ: ಸಿಎಂ ಬೊಮ್ಮಾಯಿ

ಕನ್ನಡ ಚಿತ್ರರಂಗದ ಗಣ್ಯರು ಸಹ ಉಪಸ್ಥಿತರಿರುತ್ತಾರೆ: ಇನ್ನು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್​ನ ಎವರ್ ಗ್ರೀನ್ ನಟಿ ರೇಖಾ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಎನ್ನಲಾಗಿದೆ. ಅಂದು ಕನ್ನಡ ಚಿತ್ರರಂಗದ ಗಣ್ಯರು ಸಹ ಉಪಸ್ಥಿತರಿರುತ್ತಾರೆ. 23 ರಿಂದ 30 ರವೆರೆಗೂ ಒಂದು ವಾರಗಳ ಕಾಲ ಈ ಚಲನಚಿತ್ರೋತ್ಸವ ನಡೆಯಲಿದೆ.

ಇದನ್ನೂ ಓದಿ : ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ ಸಿದ್ದರಾಮಯ್ಯ ತಿರುಕನ ತರಹ ಅಲೆಯುತ್ತಿರಲಿಲ್ಲ: ಆರ್ ಅಶೋಕ್ ವ್ಯಂಗ್ಯ

ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಪ್ರದರ್ಶನ : ಯಶವಂತಪುರ ಒರಾಯನ್‌ಮಾಲ್​ನಲ್ಲಿ ಚಿತ್ರೋತ್ಸವ ನಡೆಯಲಿದೆ. 11 ಸ್ಕ್ರೀನ್​ನಲ್ಲಿ ಚಿತ್ರಗಳು ಪ್ರದರ್ಶನ ಆಗಲಿದೆ. ಮಾರ್ಚ್ 24 ರಿಂದ 30ರವರೆಗೂ ಸಾರ್ವಜನಿಕ ಪ್ರದರ್ಶನ ನಡೆಯಲಿದೆ. ಒರಾಯನ್ ಮಾಲ್, ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಪ್ರದರ್ಶನ ಕಾಣಲಿದೆ. 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿವೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ : ಹ್ಯಾಪಿ ಬರ್ತ್​​ಡೇ ಅಶ್ವಿನಿ ಪುನೀತ್​ ರಾಜ್​ಕುಮಾರ್: ಅಪ್ಪು​ ಜನ್ಮದಿನದಂದು ಒಟಿಟಿಗೆ ಗಂಧದಗುಡಿ ಎಂಟ್ರಿ

ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಮಸ್ಯೆಗಳ ಕುರಿತು ಮಾಹಿತಿ: ಒಂದು ವಾರಗಳ ಕಾಲ ನಡೆಯುವ ಈ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ 4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಲವೊಂದು ಸಮಸ್ಯೆಗಳಿಗೆ ಹೆಚ್ಚು ಸುದ್ದಿಯಾಗುತ್ತೆ. ಈ ಬಾರಿಯ ಚಲನಚಿತ್ರೋತ್ಸವ ಸಿನಿಮಾ ಪ್ರಿಯರಿಗೆ ಯಾವ ರೀತಿಯ ಮಾಹಿತಿಯನ್ನು ನೀಡುತ್ತದೆ. ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆಯೇ? ಇವೆಲ್ಲವುಗಳಿಗಿಂತ ವೀಕ್ಷಕರಿಗೆ ಎಷ್ಟು ಖುಷಿ‌ ಕೊಡುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ : ಲಾಸ್​ ಏಂಜಲೀಸ್​ಗೂ ಮಿನಿ ದೇವಸ್ಥಾನ ಕೊಂಡೊಯ್ದ ರಾಮ್​ ಚರಣ್​ ದಂಪತಿ: ವಿಡಿಯೋ ಹಂಚಿಕೊಂಡ ಉಪಾಸನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.