ETV Bharat / state

ಬೆಂಗಳೂರಿನಲ್ಲಿ ಇಂದು ಮತ್ತೆ 14 ಕೊರೊನಾ‌ ಕೇಸ್​​ ಪತ್ತೆ: ರಾಜ್ಯದಲ್ಲಿ 1079ಕ್ಕೆ ಏರಿದ ಸೋಂಕಿತರ ಸಂಖ್ಯೆ - ಬೆಂಗಳೂರಿನಲ್ಲಿ 14 ಕೊರೋನಾ‌ ಪಾಸಿಟಿವ್

ಇಂದು ಒಂದೇ ದಿನ ಬೆಂಗಳೂರಲ್ಲಿ 14 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ.

14 Corona Positive in Bangalore
ಬೆಂಗಳೂರಿನಲ್ಲಿ 14 ಕೊರೊನಾ‌ ಪಾಸಿಟಿವ್
author img

By

Published : May 16, 2020, 1:23 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಒಂದೇ ದಿನ ಬೆಂಗಳೂರಿನಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ.

ರೋಗಿ ನಂ-653 ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದ ಇವರಲ್ಲರಿಗೂ ಸೋಂಕು ತಗುಲಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ರಾಜ್ಯದಲ್ಲಿ ಒಂದೇ ದಿನ 23 ಪ್ರಕರಣ ಪತ್ತೆ:

ಇಂದು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೊಸದಾಗಿ 23 ಪ್ರಕರಣಗಳು ವರದಿಯಾಗಿದ್ದು, 548 ಮಂದಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌ ಈವರೆಗೆ 494 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

  • ಬೆಂಗಳೂರು- 14
  • ದಾವಣಗೆರೆ- 1
  • ಹಾಸನ- 3
  • ಧಾರವಾಡ -1
  • ಉಡುಪಿ -1
  • ಬಳ್ಳಾರಿ, ಮಂಡ್ಯ, ಬಾಗಲಕೋಟೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಶಿವಾಜಿನಗರದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ: ವಲಸೆ ಕಾರ್ಮಿಕರಲ್ಲಿ ಮತ್ತೆ ಹದಿನಾಲ್ಕು ಜನರಿಗೆ ಹರಡಿದ ಸೋಂಕು

ಬೆಂಗಳೂರಿನ ಶಿವಾಜಿನಗರದ ರಿಜೆಂಟ್ ಹೋಟೆಲ್​ನಲ್ಲಿ‌ ಹೌಸ್ ಕೀಪರ್ ಕೆಲಸ ಮಾಡುತ್ತಿದ್ದ (p- 653) ವಲಸೆ ಕಾರ್ಮಿಕನ ದ್ವಿತೀಯ ಸಂಪರ್ಕದಲ್ಲಿದ್ದ 14 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರೆಲ್ಲರೂ ಶಿವಾಜಿನಗರದ ಚಾಂದಿನಿ ಚೌಕ್​​ನ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದವರಾಗಿದ್ದಾರೆ.

ಇದರಲ್ಲಿ ಹೆಚ್ಚಿನವರು ಯುವಕರಾಗಿದ್ದು, ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಊರಿನಿಂದ ಬಂದವರು ಇಕ್ಕಟ್ಟಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು‌. ಒಂದೇ ಕಟ್ಟದಲ್ಲಿ 73 ಜನ ವಾಸಿಸುತ್ತಿದ್ದರಿಂದ ಹೆಚ್ಚಿನ ಜನರಿಗೆ ಕೊರೊನಾ ತಗುಲಿದೆ. ಇಲ್ಲಿಯವರೆಗೆ ಒಬ್ಬ ವ್ಯಕ್ತಿಯಿಂದ 29 ಜನರಿಗೆ ಕೊರೊನಾ ಹರಡಿದ್ದ ಪರಿಣಾಮ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು‌. ಇಲ್ಲಿದ್ದವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ 14 ಜನರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ.

ಸೋಂಕಿತರ ವಿವರ:

  • P-1064- 27 ವರ್ಷದ ಯುವಕ
  • P-1065-25 ವರ್ಷದ ಯುವಕ
  • P-1066-20 ವರ್ಷದ ಯುವಕ
  • P-1067-50 ವರ್ಷದ ಪುರುಷ
  • P-1068-20 ವರ್ಷದ ಯುವಕ
  • P-1070-24 ವರ್ಷದ ಯುವಕ
  • P-1071-23 ವರ್ಷದ ಯುವಕ
  • P-1072-24 ವರ್ಷದ ಯುವಕ
  • P-1073-26 ವರ್ಷದ ಯುವಕ
  • P-1074-33 ವರ್ಷದ ಪುರುಷ
  • P-1075-17 ವರ್ಷದ ಬಾಲಕ
  • P- 1076-18 ವರ್ಷದ ಬಾಲಕ
  • P-1077 -19 ವರ್ಷದ ಬಾಲಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.