ETV Bharat / state

ರಾಜ್ಯದಲ್ಲಿಂದು 1,321 ಮಂದಿಗೆ ಸೋಂಕು ದೃಢ: 10 ಮಂದಿ ಬಲಿ

ಬೆಂಗಳೂರಿನಲ್ಲಿಂದು 733 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,74,024ಕ್ಕೆ ಏರಿಕೆ ಆಗಿದೆ.

corona
ಕೊರೊನಾ
author img

By

Published : Dec 6, 2020, 8:18 PM IST

ಬೆಂಗಳೂರು: ರಾಜ್ಯದಲ್ಲಿಂದು 1,321 ಜನರಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,93,006ಕ್ಕೆ ಏರಿಕೆ ಆಗಿದೆ.

ಮಾರಕ ಕೋವಿಡ್ ಸೋಂಕಿಗೆ 10 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 11,856 ತಲುಪಿದೆ. 19 ಸೋಂಕಿತರು ಅನ್ಯ ಖಾಯಿಲೆಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ 1.33 ರಷ್ಟಿದೆ. ಸಾವಿನ ಪ್ರಮಾಣ ಶೇ 0.75 ಇದೆ.‌
ಇಂದು ವೈರಸ್​ ಬಾಧೆಯಿಂದ 889 ಜನ ಗುಣಮುಖರಾಗಿದ್ದು, ಈವರೆಗೆ 8,55,750 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗಿದ್ದಾರೆ. 280 ಸೋಂಕಿತರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ 25,381 ಸಕ್ರಿಯ ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 28,121 ಜನರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1,04,552 ಜನ, ದ್ವಿತೀಯ ಸಂಪರ್ಕದಲ್ಲಿ 1,17,172 ಜನರಿದ್ದಾರೆ. ವಿಮಾನ ನಿಲ್ದಾಣದಿಂದ 396 ಪ್ರಯಾಣಿಕರು ಬಂದಿದ್ದು ಕೋವಿಡ್ ತಪಾಸಣೆಗೊಳಪಟ್ಟಿದ್ದಾರೆ.
ಓದಿ: ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಕೇಸ್: ಶಿವಮೊಗ್ಗದಲ್ಲಿ ಮುಂದುವರೆದ ನಿಷೇಧಾಜ್ಞೆ

ಬೆಂಗಳೂರಿನ ಕೋವಿಡ್‌ ರಿಪೋರ್ಟ್‌:

ಬೆಂಗಳೂರಿನಲ್ಲಿಂದು 733 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಮಹಾನಗರದಲ್ಲಿ ಸೋಂಕಿತರ ಸಂಖ್ಯೆ 3,74,024ಕ್ಕೆ ಏರಿಕೆ ಆಗಿದೆ. 275 ಸೋಂಕಿತರು ಗುಣಮುಖರಾಗಿದ್ದು, 3,50,204 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.‌ 7 ಮಂದಿ ಸೋಂಕಿತರು ವೈರಸ್​ಗೆ ಬಲಿಯಾಗಿದ್ದು, 4,183 ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 19,636.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.