ಬೆಂಗಳೂರು: ನಗರದಲ್ಲಿ ಕೋವಿಡ್ ಭೀತಿ ಮತ್ತೆ ಹೆಚ್ಚಾಗಿದ್ದು, ಇಂದು 1,048 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸತತ ಐದು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 44 ಸಾವಿರ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ವರ್ಷ ಕೋವಿಡ್ ಪರೀಕ್ಷೆ ಮಾಡಿದ ಗರಿಷ್ಠ ಸಂಖ್ಯೆ ಇದಾಗಿದ್ದು, ಇಂದು ಅಥವಾ ನಾಳೆ ಪರೀಕ್ಷಾ ವರದಿ ಬರಲಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಕುರಿತು ಮಾತನಾಡಿ, ನಗರದ ಪೂರ್ವ ವಲಯ, ಪಶ್ಚಿಮ, ದಕ್ಷಿಣ, ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ನೂರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿದೆ. ಇತರ ಭಾಗಗಳಲ್ಲಿ ಕಡಿಮೆ ಪ್ರಕರಣಗಳು ಕಂಡು ಬಂದಿದೆ. ಸದ್ಯ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.90 ರಷ್ಟು ಜನರಿಗೆ ಅಸಿಮ್ಟಮ್ಯಾಟಿಕ್ ಇದ್ದು, ಕೆಲವರಿಗೆ ಮಾತ್ರ ತೀವ್ರ ರೋಗದ ಲಕ್ಷಣಗಳು ಕಂಡು ಬರುತ್ತಿದೆ.
ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿ ಪರೀಕ್ಷೆಗೆ ಹಾಜರಾದ ಈಡಿಗರ ಹಾಸ್ಟಲ್ ವಿದ್ಯಾರ್ಥಿನಿಯರು
ಆದರೆ, ಮನೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದರೆ, ಅವರ ಪ್ರಾಥಮಿಕ ಸಂಪರ್ಕಿತರೆಲ್ಲರಿಗೂ, ಮನೆ ಮಂದಿಯೆಲ್ಲರಿಗೂ ಪಾಸಿಟಿವ್ ಬರುತ್ತಿದ್ದು, ಹೋಂ ಐಸೋಲೇಷನ್ ನಿಯಮ ಪಾಲನೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.