ಬೆಂಗಳೂರು: ಸರ್ಕಾರದ ಆದೇಶದ ಮೇರೆಗೆ 100 ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಜನತೆಯ ಆಶೀರ್ವಾದದಿಂದ ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಪಾದರಾಯನಪುರ ಗಲಭೆ ಆರೋಪಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಆರೋಪಿಗಳನ್ನ ಹಿಡಿದ ಪೊಲೀಸರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ನಿನ್ನೆ ಸಿಟಿ ಪೊಲೀಸರ ವರದಿ ನೆಗೆಟಿವ್ ಬಂದಿದೆ. ಈಗಾಗಲೇ ಎಲ್ಲಾ ಪೊಲೀಸರ ವರದಿ ನೆಗೆಟಿವ್ ಬಂದಿದ್ದು, ಪೊಲೀಸರು ನಿರಾಳರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಪಾದರಾಯನಪುರದ ಬಳಿ ಭದ್ರತೆ ಕೈಗೊಂಡಿದ್ದ ಎಲ್ಲಾ ಸಿಬ್ಬಂದಿ ಕೊರೊನಾ ಟೆಸ್ಟ್ಗೆ ಒಳಗಾಗಿದ್ದಾರೆ.