ETV Bharat / state

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 1.25 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ

ವಾರಾಂತ್ಯದ ಫಲಪುಷ್ಪ ಪ್ರದರ್ಶನಕ್ಕೆ 1.25 ಲಕ್ಷಕ್ಕೂ ಅಧಿಕ ಜನತೆ ಆಗಮಿಸಿ ವೀಕ್ಷಿಸಿದ್ದಾರೆ.

ಲಾಲ್‌ಬಾಗ್ ಫಲಪುಷ್ಪ
ಲಾಲ್‌ಬಾಗ್ ಫಲಪುಷ್ಪ
author img

By

Published : Aug 14, 2023, 9:34 AM IST

ಬೆಂಗಳೂರು: ಲಾಲ್‌ಬಾಗ್​ 'ಫಲಪುಷ್ಪ ಪ್ರದರ್ಶನ'ವನ್ನು ಭಾನುವಾರ ಬರೋಬ್ಬರಿ 1.25 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 80.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ. ಹೀಗಾಗಿ ವಾರಾಂತ್ಯದ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಹೂವುಗಳ ಜಾತ್ರೆಯನ್ನು ಕಣ್ತುಂಬಿಕೊಂಡರು.

ಫಲಪುಷ್ಪ ಪ್ರದರ್ಶನ
ಫಲಪುಷ್ಪ ಪ್ರದರ್ಶನ

ಸ್ವಾತಂತ್ರ್ಯ ದಿನದ ನಿಮಿತ್ತ ನಡೆಯುತ್ತಿರುವ 214ನೇ ಹೂವುಗಳ ಹಬ್ಬದ ಹತ್ತನೇ ದಿನ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಲಾಲ್‌ಬಾಗ್‌ನಲ್ಲಿ ಜನಜಾತ್ರೆಯೇ ನೆರೆದಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ ಲಾಲ್‌ಬಾಗ್ ಜನಜಂಗುಳಿಯಿಂದ ಕೂಡಿತ್ತು. ಈ ವರ್ಷದ ಪುಷ್ಪ ಪ್ರದರ್ಶನಕ್ಕೆ ದಿನವೊಂದಕ್ಕೆ ಭೇಟಿ ನೀಡಿದ ಗರಿಷ್ಠ ಸಂಖ್ಯೆ ಇದಾಗಿದೆ. ಇನ್ನು ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಬರುವ ಸಾಧ್ಯತೆ ಇದ್ದ ಕಾರಣದಿಂದ 700ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

ಸ್ವಾತಂತ್ರ್ಯ ದಿನಾಚರಣೆ ಎಂದು ಮೆಟ್ರೋ ರೈಲಿನ ದರದಲ್ಲಿ ಇಳಿಕೆ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಕಡಿಮೆ ದರದಲ್ಲಿ ಲಾಲ್​ಬಾಗ್​ಗೆ ತೆರಳಲು ಅವಕಾಶ ನೀಡಿರುವ ಕಾರಣದಿಂದ ಅಂದು ಹೆಚ್ಚಿನ ಪ್ರಮಾಣದಲ್ಲಿ ಜನತೆ ಬರುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಫಲಪುಷ್ಪ ಪ್ರದರ್ಶನ
ಫಲಪುಷ್ಪ ಪ್ರದರ್ಶನ

ಕಳೆದ ಭಾನುವಾರ 67 ಸಾವಿರ ಮಂದಿ ವೀಕ್ಷಣೆ: ಕಳೆದ ಭಾನುವಾರ 6 ರಂದು ಮೋಡ ಕವಿದ ವಾತಾವರಣ ಮತ್ತು ಮಳೆ ಇದ್ದರೂ 67 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ, ಅಂದಾಜು 47 ಲಕ್ಷ ರೂ ಸಂಗ್ರಹವಾಗಿತ್ತು. ಇದರ ಹಿಂದಿನ ದಿನ ಶನಿವಾರ 28 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ, 18.5 ಲಕ್ಷ ರೂ. ಸಂಗ್ರಹವಾಗಿತ್ತು.

ಫಲಪುಷ್ಪ ಪ್ರದರ್ಶನ
ಫಲಪುಷ್ಪ ಪ್ರದರ್ಶನ

ವಿಶೇಷ ಆಕರ್ಷಣೆಯಾಗಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ: ಕೆಂಗಲ್ ಹನುಮಂತಯ್ಯ ಅವರ ಹಿರಿಮೆ ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನದಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ. 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ. ಇನ್ನುಳಿದು, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸುತ್ತಿವೆ. ರೈಲ್ವೆ ಸಚಿವರಾಗಿ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾಗಿರುವ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ.

ಫಲಪುಷ್ಪ ಪ್ರದರ್ಶನ
ಫಲಪುಷ್ಪ ಪ್ರದರ್ಶನ

ಇದನ್ನೂ ಓದಿ: Lal Bagh: ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನ ನೋಡಲು ಜನಸ್ತೋಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.