ದೊಡ್ಡಬಳ್ಳಾಪುರ(ಬೆಂ.ಗ್ರಾ): ಸಂಜಯನಗರದ ಸ್ಮಶಾನದಲ್ಲಿ ಸೇರಿಕೊಂಡಿದ್ದ ಕಾಡುಹಂದಿಯೊಂದು ದಾರಿಹೋಕರ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಟಿ.ಆರ್.ಬಡಾವಣೆ ವ್ಯಾಪ್ತಿಯ ಸ್ಮಶಾನದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಾಡುಹಂದಿಯೊಂದು ಸೇರಿಕೊಂಡಿದ್ದು, ಸ್ಥಳೀಯರು ಸಾಮಾನ್ಯ ಹಂದಿ ಎಂದು ಕಡೆಗಣಿಸಿದ್ದರು. ಆದರೆ, ಇತ್ತೀಚೆಗೆ ದಾರಿಹೋಕರ ಮೇಲೆ ಈ ಹಂದಿ ದಾಳಿಗೆ ಮುಂದಾಗಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಇದು ಎರಡು ಕೋರೆ ಹಲ್ಲುಗಳು ಇರುವ ಕಾಡು ಹಂದಿ ಎಂದು ತಿಳಿದು ಬಂದಿದೆ.
ನಗರಸಭೆ ಅಧ್ಯಕ್ಷರಾದ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರ ಏರಿಯಾದಲ್ಲಿ ಕಾಡುಹಂದಿ ಪ್ರತ್ಯಕ್ಷವಾಗಿದ್ದು, ಇದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮುಂದುವರೆದ ವ್ಯಾಘ್ರ ಘರ್ಜನೆ: ಜನರಲ್ಲಿ ಹೆಚ್ಚಿದ ಆತಂಕ