ETV Bharat / state

ಎರಡು ತಿಂಗಳ ನಂತರ ರಿಕಿ ಕೇಜ್ ಕೈ ಸೇರಿದ ಗ್ರ್ಯಾಮಿ: ಯಾಕೆ ಗೊತ್ತೇ? - ಸಂಗೀತ ನಿರ್ದೇಶಕ ರಿಕಿ ಕೇಜ್ ಆಸ್ಕರ್ ಗ್ರ್ಯಾಮಿ ಪ್ರಶಸ್ತಿ

ಬೆಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಆಸ್ಕರ್ ಗ್ರ್ಯಾಮಿ ಪ್ರಶಸ್ತಿಯನ್ನು ಅಮೆರಿಕದ ಲಾಸ್ ವೇಗಾಸ್​ನಲ್ಲಿ ಪಡೆದಿದ್ದರು. ಆದ್ರೆ ಎರಡು ತಿಂಗಳ ನಂತರ ಈ ಪದಕ ಅವರ ಕೈಸೇರಿದೆ.

Two months later Ricky Cage gets Oscar Grammy Medal
ಎರಡು ತಿಂಗಳ ನಂತರ ರಿಕಿ ಕೇಜ್ ಕೈ ಸೇರಿದ ಆಸ್ಕರ್ ಗ್ರ್ಯಾಮಿ ಪದಕ
author img

By

Published : Jun 8, 2022, 6:16 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರ ಆಸ್ಕರ್ ಗ್ರ್ಯಾಮಿ ಪದಕವು ಕೊರಿಯರ್ ಕಂಪನಿಗೆ ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ಕಳೆದೆರಡು ತಿಂಗಳಿಂದ ಕಸ್ಟಮ್ಸ್​ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದೀಗ ಅಧಿಕಾರಿಗಳ ಸಹಾಯದಿಂದ ಮತ್ತೆ ಪದಕ ರಿಕಿ ಕೇಜ್ ಕೈಸೇರಿದೆ.

ಅಮೆರಿಕದ ಲಾಸ್ ವೇಗಾಸ್​ನಲ್ಲಿ ನಡೆದ 64ನೇ ಆವೃತ್ತಿಯಲ್ಲಿ ಬೆಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಆಸ್ಕರ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯ ಭಾಗವಾಗಿ ಕೊಡುವ ಪದಕವನ್ನು ಅಮೆರಿಕದ ಪ್ರಸಿದ್ಧ ಆಭರಣ ಕಂಪನಿ ಟಿಫಾನಿ ಚಿನ್ನದಿಂದ ತಯಾರಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಫೆಡ್‌ಎಕ್ಸ್ ಕೊರಿಯರ್ ಎಜೆನ್ಸಿ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಪೂರಕವಾದ ದಾಖಲೆಗಳನ್ನು ಫೆಡ್ ಎಕ್ಸ್ ಕೊಟ್ಟಿರಲಿಲ್ಲ.

ಆಸ್ಕರ್ ಗ್ರ್ಯಾಮಿ ಪದಕ

ಬಹುಮಾನ ತೆಗೆದುಕೊಳ್ಳುಲು ಹೋದಾಗ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಕೋಡುವಂತೆ ರಿಕಿ ಕೇಜ್ ಅವರಿಗೆ ಕೇಳಿದ್ದಾರೆ. ಆದರೆ ಕೊರಿಯರ್​ಗೆ ಸಂಬಂಧಿಸಿದ ದಾಖಲೆಗಳನ್ನು ಕೊಡಲಾಗದೆ, ಕಳೆದ ಎರಡು ತಿಂಗಳಿನಿಂದ ಗ್ರ್ಯಾಮಿ ಪದಕ ಬೆಂಗಳೂರು ಕಸ್ಟಮ್ಸ್​ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಗ್ರ್ಯಾಮಿ ಪದಕವನ್ನು ಪಡೆಯಲಾಗದೆ ನಿರಾಶೆಗೊಂಡ ರಿಕಿ ಕೇಜ್ ಸಾಮಾಜಿಕ ಜಾಲತಾಣಗಳಲ್ಲಿ ಕಸ್ಟಮ್ಸ್​​ನಲ್ಲಿ ಸಿಕ್ಕಿಕೊಂಡಿರುವ ಬಗ್ಗೆ ಬರೆದುಕೊಂಡಿದ್ದರು. ತಕ್ಷಣವೇ ಸ್ಪಂದಿಸಿದ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ರಿಕಿ ಕೇಜ್​​ಗೆ ಪದಕ ತಲುಪಿಸಿದ್ದಾರೆ.

ಇದನ್ನೂ ಓದಿ: 2ನೇ ಬಾರಿಗೆ ಗ್ರ್ಯಾಮಿ ಅವಾರ್ಡ್ ಪಡೆದ ಬೆಂಗಳೂರಿನ ರಿಕಿ ಕೇಜ್‌

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.