ನೆಲಮಂಗಲ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನೆಲಮಂಗಲ ಪಟ್ಟಣದ ಪ್ರಸನ್ನಾಂಜಿನೇಯ ಲೇಔಟ್ನ ಯಶೋಧ ಹಾಗೂ ಚೈತ್ರಾ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಯಶೋಧರ ಮನೆಯಲ್ಲಿ ಹತ್ತು ಸಾವಿರ ನಗದು 25 ಗ್ರಾಂ. ಚಿನ್ನಾಭರಣ ಕಳ್ಳತನ ನಡೆದಿದೆ. ಇನ್ನು ಚೈತ್ರಾರ ಮನೆಗೆ ನುಗಿದ್ದ ಕಳ್ಳರು ಮನೆ ಬಾಗಿಲು ಹೊಡೆದು ಲಾಕರ್ನಲ್ಲಿದ್ದ 5000 ಹಣ ಮತ್ತು 15 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಾಲೇಜಿನಿಂದ ಚೈತ್ರಾರವರ ಮಗ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.