ETV Bharat / state

ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ... ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹ

author img

By

Published : Jun 25, 2019, 5:57 AM IST

Updated : Jun 25, 2019, 6:50 AM IST

ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ದೇವಸ್ಥಾನಕ್ಕೆ ಬಂದ ಭಕ್ತರು ನೀಡಿದ ಕಾಣಿಕೆ ಹಣ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ಘಾಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ

ದೊಡ್ಡಬಳ್ಳಾಪುರ : ಈ ವರ್ಷ ಪಶ್ಚಿಮಘಟ್ಟ ಪ್ರದೇಶದ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ನೀರಿನ ಬರ ತಟ್ಟಿದ ಪರಿಣಾಮ ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಶುಕ್ರದೆಸೆ ಒಲಿದಿದೆ.

ಘಾಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬತ್ತಿದ ಹಿನ್ನೆಲೆ ಸ್ವತಃ ವೀರೇಂದ್ರ ಹೆಗಡೆ ಕ್ಷೇತ್ರಕ್ಕೆ ಭಕ್ತರು ಬರದಂತೆ ವಿನಂತಿ ಮಾಡಿದರು. ಈ ಹಿನ್ನೆಲೆಯಲ್ಲಿ ಭಕ್ತರು ಬೆಂಗಳೂರು ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಣಿಕೆ ಹಣದಲ್ಲಿ ಭಾರೀ ಏರಿಕೆಯಾಗಿದೆ. ಜೂನ್ ತಿಂಗಳಲ್ಲಿ 49,85,893 ರೂ ಹಣ ಸಂಗ್ರಹವಾಗಿದೆ. ಆಡಳಿತಾಧಿಕಾರಿ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯ ಮಾಡಲಾಗಿದೆ.

ಆಶ್ಚರ್ಯವೆಂದರೆ ಯೂರೋಪ್, ಮಲೇಷಿಯಾ, ಅಮೆರಿಕ, ದುಬೈ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ. 50‌ರ ಮುಖ ಬೆಲೆಯ 14 ಡಾಲರ್, ಓಮನ್ ದೇಶದ 37 ನೋಟುಗಳು ಸಿಕ್ಕಿವೆ. ಇಷ್ಟೆ ಅಲ್ಲದೆ ಭಾರತದ ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಸಹ ಪತ್ತೆಯಾಗಿವೆ.

ಹುಂಡಿಯಲ್ಲಿ 4 ಗ್ರಾಂ ಚಿನ್ನ, 2180 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿದೆ. ಇನ್ನು ಆಡಳಿತ ಮಂಡಳಿ ಎಣಿಕೆ ಕಾರ್ಯದಲ್ಲಿ ಭಕ್ತರಿಗೂ ಅವಕಾಶವನ್ನು ನೀಡಿತ್ತು. ಹುಂಡಿ ಹಣ ಏಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Intro:ಪಶ್ಚಿಮ ಘಟ್ಟದ ದೇವಸ್ಥಾನಗಳಲ್ಲಿ ನೀರಿನ ಬರ

ಘೌಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ ದಾಖಲೆ ಪ್ರಮಾಣದಲ್ಲಿ ಹುಂಡಿ ಹಣ ಸಂಗ್ರಹ
Body:ದೊಡ್ಡಬಳ್ಳಾಪುರ : ಜೂನ್ ತಿಂಗಳಲ್ಲಿ ಪಶ್ಚಿಮ ಘಟ್ಟದ ಧಾರ್ಮಿಕ ಕ್ಷೇತ್ರಗಳಿಗೆ ನೀರಿನ ಬರ ತಟ್ಟಿದ ಪರಿಣಾಮ ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ ಒಲಿದಿದೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬತ್ತಿದ ಹಿನ್ನೆಲೆ ಸ್ವತಹ ವೀರೇಂದ್ರ ಹೆಗಡೆ ಕ್ಷೇತ್ರಕ್ಕೆ ಭಕ್ತರು ಬರದಂತೆ ವಿನಂತಿ ಮಾಡಿದರು. ಇದರಿಂದಾಗಿ ಭಕ್ತರು ಬೆಂಗಳೂರು ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರು. ಇದರ ಫಲ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಒಲಿದಿದೆ. ಹುಂಡಿ ಹಣ ಸಂಗ್ರಹದಲ್ಲಿ ದಾಖಲೆ ಮಟ್ಟದಲ್ಲಿ ಸಂಗ್ರಹವಾಗಿದೆ. ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿ ಜೂನ್ ತಿಂಗಳ ಹುಂಡಿ‌ಹಣ ಎಣಿಕೆ 49,85,893 ರೂ ಹಣ ಸಂಗ್ರಹವಾಗಿದೆ.ಅಡಳಿತಾಧಿಕಾರಿ ಸಮ್ಮಖದಲ್ಲಿ ಹಣ ಎಣಿಕೆ ಕಾರ್ಯ ಮಾಡಲಾಗಿ .ದೇವರ ಹುಂಡಿಯಲ್ಲಿ 49,85,893 ರೂ ಹಣ ಸಂಗ್ರಹವಾಗಿದೆ.

ಯೂರೋಪ್, ಮಲೇಷಿಯಾ, ಅಮೇರಿಕಾ, ದಯಬೈ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ. 50‌ ಮುಖ ಬೆಲೆಯ 14 ಡಾಲರ್, ಓಮನ್ ದೇಶದ 37 ನೋಟುಗಳು ಸಿಕ್ಕಿದೆ. ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಸಹ ಪತ್ತೆ ಸಿಕ್ಕಿದೆ.
4 ಗ್ರಾಂ ಚಿನ್ನ, 2180 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿದೆ. ಎಣಿಕೆ ಕಾರ್ಯದಲ್ಲಿ ಭಕ್ತರಿಗೂ ಅವಕಾಶವನ್ನು ಆಡಳಿತ ಮಂಡಳಿ ನೀಡಿತ್ತು. ಹುಂಡಿ ಹಣ ಏಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Conclusion:
Last Updated : Jun 25, 2019, 6:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.