ಆನೇಕಲ್: ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆನೇಕಲ್-ತಳಿ ರಸ್ತೆಯಲ್ಲಿರುವ ನೂತನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಬಗ್ಗೆ ಹೇಳಲು ಪ್ರಾಂಶುಪಾಲರ ಬಳಿ ಹೋದ್ರೆ ಅವರು ನಮಗೇ ನಿಂದಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸಮಸ್ಯೆ ಬಗೆಹರಿಯುವರೆಗೂ ಪ್ರತಿಭಟಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 250 ವಿದ್ಯಾರ್ಥಿನಿಯರು ನಿನ್ನೆ ಮಧ್ಯಾಹ್ನದಿಂದ ಊಟ ತ್ಯಜಿಸಿ ಶಾಲೆಯ ಗೇಟ್ ಬಳಿ ಧರಣಿ ಕುಳಿತಿದ್ದಾರೆ. ಇದುವರೆಗೂ ಇವರ ಸಮಸ್ಯೆ ಆಲಿಸಲು ಪ್ರಾಂಶುಪಾಲರಾಗಲಿ, ಹಾಸ್ಟೆಲ್ ವಾರ್ಡನ್ ಅಗಲಿ ಬಂದಿಲ್ಲವೆಂದು ತಿಳಿದುಬಂದಿದೆ.