ನೆಲಮಂಗಲ: ಶ್ರೀಕೃಷ್ಣಜನ್ಮಷ್ಟಾಮಿ ಪ್ರಯುಕ್ತ ನಂದಗೋಕುಲ-2019 ಕಾರ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷ ಎನಿಸಿತು. ಜೊತೆಗೆ ಶ್ರೀಕೃಷ್ಣನಂತೆ ಛದ್ಮ ವೇಷ ಧರಿಸಿ ಪ್ರಶಸ್ತಿಯನ್ನೂ ಪಡೆದುಕೊಂಡರು.
ಯಲಹಂಕ ಸಮೀಪದ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮದಲ್ಲಿ ಕೃಷ್ಣ ಮತ್ತು ರಾಧೆ ಛದ್ಮವೇಷ ಸ್ವರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಒಂದೂವರೆ ವರ್ಷದೊಳಗಿನ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ಭಾಗವಹಿಸಿದರು. ಅತ್ಯುತ್ತಮ ಛದ್ಮವೇಷಧಾರಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಶ್ರೀಕೃಷ್ಣನಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮಕ್ಕಳೂ ಭಾಗವಹಿಸಿದ್ದು ಈ ಕಾರ್ಯಕ್ರಮದ ವಿಶೇಷತೆ ಎಂದು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷೆ ಸಂತೋಷಿ ಪ್ರಶಾಂತ್ ಸಂತಸ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಒಬ್ಬ ಕೃಷ್ಣನನ್ನಷ್ಟೇ ನೋಡಬಹುದು. ಅದರಿಲ್ಲಿ ನೂರಾರು ರಾಧಾ-ಕೃಷ್ಣರಿದ್ದಾರೆ. ಅವರನ್ನು ಮಕ್ಕಳಲ್ಲಿ ನೋಡುವ ಸೌಭಾಗ್ಯ ಸಿಕ್ಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯಲಹಂಕ ಘಟಕ ಅಧ್ಯಕ್ಷ ಮನುಗೌಡ ಹೇಳಿದರು.