ದೊಡ್ಡಬಳ್ಳಾಪುರ: ರಾತ್ರೋರಾತ್ರಿ ಕೆಂಪೇಗೌಡರ ಪ್ರತಿಮೆಯನ್ನೂ ಗ್ರಾಮದ ಒಂದು ಸಮುದಾಯದವರು ಸ್ಥಾಪನೆ ಮಾಡಿದ್ದರು. ಇದರಿಂದ ಕೆರಳಿದ ಮತ್ತೊಂದು ಸಮುದಾಯ ಇಂದು ಮುಂಜಾನೆ 1.30ರ ಸುಮಾರಿಗೆ ಶಿವಕುಮಾರ ಸ್ವಾಮೀಜಿಯ ಫೋಟೋ ಇರುವ ಪ್ರತಿಮೆಯನ್ನು ಸ್ಥಾಪನೆ ಮಾಡಿದೆ. ಈ ದೃಶ್ಯ ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಡಿಗೇಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದವರು ಜಿದ್ದಾಜಿದ್ದಿಗೆ ಬಿದ್ದು, ಕೇಂಪೇಗೌಡ ಹಾಗೂ ಶಿವಕುಮಾರ ಸ್ವಾಮೀಜಿ ಪ್ರತಿಮೆ ಸ್ಥಾಪಿಸಿರುವ ಘಟನೆ ತಾರಕಕ್ಕೇರಿದ್ದು, ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಮುಂದಿವರಿದಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಒಂದು ಸಮುದಾಯದವರು ರಾತ್ರೋರಾತ್ರಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಿರುವುದರಿಂದ ಕೋಪಗೊಂಡು ಇನ್ನೊಂದು ಸಮುದಾಯದವರು ರಾತ್ರೋರಾತ್ರಿ ಬಂದು ಪಕ್ಕದಲ್ಲೇ ಶಿವಕುಮಾರ ಸ್ವಾಮೀಜಿ ಫೋಟೋ ಇರುವ ಕಲ್ಲು ಸ್ಥಾಪನೆ ಮಾಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ತಾಲೂಕು ಆಡಳಿತ ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.
ಇದನ್ನೂ ಓದಿ: ಪ್ರತಿಮೆ ಸ್ಥಾಪನೆ ವಿಚಾರ ಎರಡು ಸಮುದಾಯದಲ್ಲಿ ಘರ್ಷಣೆ: ಕೊಡಿಗೇಹಳ್ಳಿಯಲ್ಲಿ ಪೊಲೀಸ್ ಬಿಗಿ ಭದ್ರತೆ