ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಪ್ರಸಿದ್ಧ ಚಾರಣಿಗರ ಸ್ವರ್ಗ, ದಕ್ಷಿಣಕಾಶಿ ಶ್ರೀ ಕ್ಷೇತ್ರ ಶಿವಗಂಗೆಯ ಶ್ರೀಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯಗಳ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 4 ಲಕ್ಷದ 77 ಸಾವಿರದ 750 ರೂ. ಹಣ ಸಂಗ್ರಹವಾಗಿದೆ.
ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ ಹಣ ಎಣಿಕೆ ಮಾಡಲಾಗುತ್ತೆ. ಅದರಂತೆ ಮುಜರಾಯಿ ಇಲಾಖೆಯ ತಹಶೀಲ್ದಾರ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಅರ್ಚಕರ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಸಂಕ್ರಾಂತಿ ವೇಳೆ, ಜಾತ್ರೆಯಿಂದಲೂ ಈ ದೇವಾಲಯಗಳ ಹುಂಡಿ ಹಣ ಎಣಿಕೆಯಾಗಿರಲಿಲ್ಲ. ಜೊತೆಗೆ ಎರಡು ತಿಂಗಳಿನಿಂದ ಕೋವಿಡ್ನಿಂದ ದೇವಾಲಯದ ಬಾಗಿಲು ಬಂದ್ ಮಾಡಲಾಗಿತ್ತು. ಇದರಿಂದ ದೇವಾಲಯದ ಸಿಬ್ಬಂದಿಗೆ ವೇತನ ನೀಡಲು ಕಷ್ಟವಾಗಿದ್ದು, ದೇವಾಲಯದ ಆದಾಯ ಕೊರತೆಯಿಂದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದೆ.
ಇದನ್ನೂ ಓದಿ: ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ: ಮಹಿಳೆ ಸಾವು, ಅವಳಿ ಮಕ್ಕಳು ಸುರಕ್ಷಿತ