ನೆಲಮಂಗಲ : ದಕ್ಷಿಣಕಾಶಿ ಶಿವಗಂಗೆಯ ಮೇಲಣ ಗವಿಮಠದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳ ಸಮ್ಮುಖದಲ್ಲಿ ನಟ ಸುದೀಪ್ ಅವರಿಗೆ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುದೀಪ್, ಕೊರೊನಾ ಬಗ್ಗೆ ಅಸಡ್ಡೆ ಬೇಡ ಜಾಗೃತರಾಗಿ. ಮಾರಣಾಂತಿಕ ರೋಗದ ಬಗ್ಗೆ ಅರಿವಿರಲಿ. ಈ ವೈರಸ್ ಭಯಾನಕವಾಗಿದೆ ಜಾಗೃತಿ ವಹಿಸಿ, ಮಾಸ್ಕ್ ಹಾಕಿಕೊಳ್ಳಿ ಅಣ್ಣ ತಮ್ಮಂದಿರೇ ಎಂದು ಕರೆ ನೀಡಿದರು. ಇದೇ ವೇಳೆ, ಈ ಪ್ರಶಸ್ತಿ ಬಹಳ ತೂಕವಾಗಿದೆ, ಇದನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದೇನೆ ಎಂದರು.
ಸಮಾರಂಭದಲ್ಲಿ ಹಲವಾರು ಗಣ್ಯರು ಸೇರಿದಂತೆ ಮಠಾಧೀಶರು ಹಾಗೂ ಮೇಲಣ ಗವಿಮಠದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಇದನ್ನೂ ಓದಿ: ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ 'ತೋತಾಪುರಿ' ಚಿತ್ರತಂಡ