ETV Bharat / state

ನನ್‌ ಜೀವ ಬೇಕಾದ್ರೂ ಕೊಡ್ತೀನಿ ನನ್‌ ಮಕ್ಕಳಂತೆ ಸಾಕಿರುವ ಮರ ಕಡಿಯಲು ಬಿಡಲ್ಲ.. -ಪದ್ಮಶ್ರೀ ತಿಮ್ಮಕ್ಕ - undefined

ರಾಜ್ಯ ಹೆದ್ದಾರಿ 94 ಬಾಗೇಪಲ್ಲಿ, ಹಲಗೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳ ರಸ್ತೆಯ ಮೂಲಕವೇ ರಾಜ್ಯ ಹೆದ್ದಾರಿ 94 ಹಾದು ಹೋಗಲಿದೆ. ಒಂದು ವೇಳೆ ರಸ್ತೆ ಅಗಲೀಕರಣವಾದರೆ 287 ಮರಗಳಿಗೆ ಕೊಡಲಿ ಬೀಳಲಿದ್ದು, ಇದರ ಜೊತೆಗೆ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಇಲ್ಲಿನ ಒಂದೆಂದೂ ಮರವನ್ನ ತಿಮ್ಮಕ್ಕ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

Bangalore
author img

By

Published : Jun 3, 2019, 11:54 PM IST

ನೆಲಮಂಗಲ: ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ಗ್ರಾಮದಲ್ಲಿ ತಾವು ಮಕ್ಕಳಂತೆ ಬೆಳೆಸಿದ ಸಾಲುಮರಗಳು ಬಲಿಯಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸಾಲು ಮರದ ತಿಮ್ಮಕ್ಕ ಸಿಎಂ ಹೆಚ್‌ಡಿಕೆ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ.

ಹೆದ್ದಾರಿ ಅಗಲೀಕರಣಕ್ಕೆ ಸಾಲುಮರದ ತಿಮ್ಮಕ್ಕ ಬೆಳೆಸಿದ ಮರಗಳು ಬಲಿವಾಗುತ್ತಾ?

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ ತಿಮ್ಮಕ್ಕ ಕುದೂರು ಗ್ರಾಮದಿಂದ ಹುಲಿಕಲ್ ಗ್ರಾಮದವರೆಗೂ ರಸ್ತೆಯ ಎರಡು ಬದಿಯಲ್ಲಿ 4 ಕಿ.ಮೀ ವರೆಗೂ 287 ಮರ ಬೆಳೆಸಿದ್ದಾರೆ. ಈ ಮರಗಳು ಈಗ ಬೃಹತ್ತಾಗಿ ಬೆಳೆದು ರಸ್ತೆಗೆ ಚಪ್ಪರದಂತೆ ಬೆಳೆದಿವೆ. ದಾರಿಹೋಕರಿಗೆ ನೆರಳು. ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೆರಳು ನೀಡುತ್ತಿವೆ. ಆದರೆ, ಇದೇ ಮರಗಳಿಗೆ ಇವತ್ತು ಕೊಡಲಿ ಬೀಳುವ ಅಪಾಯ ಎದುರಾಗಿದೆ.

ರಾಜ್ಯ ಹೆದ್ದಾರಿ 94 ಬಾಗೇಪಲ್ಲಿ, ಹಲಗೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳ ರಸ್ತೆಯ ಮೂಲಕವೇ ರಾಜ್ಯ ಹೆದ್ದಾರಿ 94 ಹಾದು ಹೋಗಲಿದೆ. ಒಂದು ವೇಳೆ ರಸ್ತೆ ಅಗಲೀಕರಣವಾದರೆ 287 ಮರಗಳಿಗೆ ಕೊಡಲಿ ಬೀಳಲಿದ್ದು, ಇದರ ಜೊತೆಗೆ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಇಲ್ಲಿನ ಒಂದೆಂದೂ ಮರವನ್ನ ತಿಮ್ಮಕ್ಕ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಯಾವುದೇ ಕಾರಣಕ್ಕೂ ಸಾಲು ಮರಗಳ ಒಂದೇ ಒಂದು ರೆಂಬೆಯನ್ನೂ ಕಡಿಯಲು ಬಿಡುವುದಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲದೆ ಹೋದರೆ ನಾನು ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮರ ಉಳಿಸಿಕೊಳ್ಳಲು ಡಿಸಿಎಂ, ಸಿಎಂ ಮೊರೆ :
ತಿಮ್ಮಕ್ಕ ಮಕ್ಕಳಂತೆ ಬೆಳೆಸಿದ ಮರಗಳನ್ನು ಉಳಿಸಿಕೊಳ್ಳಲು ಉಪಮುಖ್ಯಮಂತ್ರಿ ಪರಮೇಶ್ವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು. ಹಾಗೆಯೇ ಸಿಎಂ ಹೆಚ್​ಡಿಕೆ ಅವರಿಗೂ ಸಾಲು ಮರದ ತಿಮ್ಮಕ್ಕ ಮನವಿ ಮಾಡಿದ್ದು, ಇಬ್ಬರೂ ನಾಯಕರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ.

Intro:ರಸ್ತೆ ಅಗಲೀಕರಣಕ್ಕೆ ಸಾಲುಮರದ ತಿಮ್ಮಕ್ಕನ ಮರಗಳು ಬಲಿ.?

ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಪರಮೇಶ್ವರ್ ಭೇಟಿ ಮಾಡಿದ ವೃಕ್ಷಮಾತೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮರ ಉಳಿಸುವ ಭರವಸೆ ನೀಡಿದ ಸಿಎಂ ಮತ್ತು ಡಿಸಿಎಂ.

Body:ನೆಲಮಂಗಲ : ಮಕ್ಕಳಂತೆ 287 ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕನ ಮರಗಳಿಗೆ ಕೊಡಲಿ ಬಿಳಲಿದೆ. ರಸ್ತೆ ಅಗಲೀಕರಣಕ್ಕಾಗಿ ವೃಕ್ಷಮಾತೆ ನೆಟ್ಟು ಬೆಳೆಸಿದ ಮರಗಳು ಬಲಿಯಾಗಲಿದ್ದು. ತನ್ನ ಮರಿಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ರವರನ್ನು ಭೇಟಿ ಮಾಡಿ ಮರಗಳನ್ನು ಉಳಿಸುವಂತೆ ಮನವಿ ಮಾಡಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವೃಕ್ಷಮಾತೆ ಅಂತಲೇ ವಿಶ್ವವಿಖ್ಯಾತಿ ಪಡೆದವರು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ ತಿಮ್ಮಕ್ಕ. ಮಕ್ಕಳಿಲ್ಲದ ಕೊರಗನ್ನು ಗಂಡನ ಜೊತೆ ಸೇರಿ ಕುದೂರು ಗ್ರಾಮದಿಂದ ಹಿಡಿದು ಹುಲಿಕಲ್ ಗ್ರಾಮದ ವರೆಗೂ ರಸ್ತೆಯ ಎರಡು ಬದಿ 4 ಕಿ.ಮೀ ವರೆಗೂ 287 ಮರಗಳನ್ನು ತಮ್ಮ ಮಕ್ಕಳಂತೆ ಬೆಳೆಸಿದು. ಇಂದು ಈ ಮರಗಳು ಬೃಹತಾಗಿ ಬೆಳೆದು ರಸ್ತೆಗೆ ಸೂರ್ಯನ ಕಿರಣಗಳೇ ಬಿಳದಂತೆ ಚಪ್ಪರದಂತೆ ಬೆಳೆದಿವೆ. ದಾರಿಹೋಕರಿಗೆ ನೆರಳು. ಪ್ರಾಣಿ ಪಕ್ಷಿಗಳಿ ಆಹಾರ ನೆರಳು ನೀಡುತ್ತಿರುವ ಸಾಲು ಮರಗಳು ತಿಮ್ಮಕ್ಕರವರಿಗೆ ವಿಶ್ವಖ್ಯಾತಿಯನ್ನು ತಂದಿದ್ದು. ಸಾಲು ಮರದ ತಿಮ್ಮಕ್ಕ ಅಂತಾನೇ ಪ್ರಸಿದ್ಧರಾಗಿದ್ದಾರೆ. ಅದರೆ ಇದೇ ಮರಗಳಿಗೆ ಇವತ್ತು ಕೊಡಲಿ ಬಿಳುವ ಅಪಾಯವಿದೆ

ರಾಜ್ಯ ಹೆದ್ದಾರಿ 94 ಬಾಗೇಪಲ್ಲಿ – ಹಲಗೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು. ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯ ಹೆದ್ದಾರಿ 94 ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳ ರಸ್ತೆಯ ಮೂಲಕವೇ ಹಾದು ಹೋಗಲಿದ್ದು ಒಂದು ವೇಳೆ ರಸ್ತೆ ಅಗಲೀಕರಣಲಾದ್ದಲ್ಲಿ. 287 ಮರಗಳಿಗೆ ಕೊಡಲಿ ಬಿಳಲಿದೆ.

ಇಲ್ಲಿನ ಒದೂಂದು ಮರವೂ ತಿಮ್ಮಕ್ಕನ ಮಕ್ಕಳಂತೆ. ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಪ್ರೇಮದ ಸಂದೇಶ ಸಾರುವ ಜೊತೆಗೆ ತಿಮ್ಮಕ್ಕರವರಿಗೆ ಅಂತರಾಷ್ಟ್ರೀಯ ಮನ್ನಣೆ ನೀಡಿದೆ
ಒಂದು ವೇಳೆ ಈ ರಸ್ತೆಯನ್ನು ಅಗಲೀಕರಣಗೊಳಿಸಲು ಹೊರಟರೆ ಸಾಲುಮರಗಳ ಜೊತೆ ತಿಮ್ಮಕ್ಕನ ಮನೆಯೂ ನೆಲಸಮವಾಗಲಿದೆ. ಈ ಬಗ್ಗೆ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಯಾವುದೇ ಕಾರಣಕ್ಕೂ ಸಾಲುಮರಗಳ ಒಂದೇ ಒಂದು ರೆಂಬೆಯನ್ನೂ ಕಡಿಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ನನ್ನ ಮಾತಿಗೆ ಬೆಲೆ ಇಲ್ಲದೆ ಹೋದರೆ ನಾನು ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮರಗಳನ್ನು ಉಳಿಸಿಕೊಳ್ಳಲು ಡಿಸಿಎಂ ಸಿಎಂ ಮೊರೆ ಹೋದ ಸಾಲುಮರದ ತಿಮ್ಮಕ್ಕ.

ಮಕ್ಕಳಂತೆ ಬೆಳೆಸಿದ ಮರಗಳನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಪರಮೇಶ್ವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮರಗಳನ್ನು ಕಾಪಾಡುವಂತೆ ಮನವಿ ಮಾಡಿದರು. ಸಾಲುಮರದ ತಿಮ್ಮಕ್ಕರವರ ಮನವಿಗೆ ಸ್ಪಂದಿಸಿದ ಡಿಸಿಎಂ ಪರಮೇಶ್ವರ್ ಮರಗಳನ್ನು ಉಳಿಸಿಕೊಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸಹ ಮರ ಕಡಿಯುವ ಬದಲಿ ಮಾರ್ಗದಲ್ಲಿ ರಸ್ತೆ ನಿರ್ಮಿಸುವುದ್ದಾಗಿ ಸಾಲುಮರದ ತಿಮ್ಮಕ್ಕರವರಿಗೆ ಭರವಸೆ ನೀಡಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.