ಆನೇಕಲ್: ಕೆಲದಿನಗಳ ಹಿಂದೆ ಈಟಿವಿ ಭಾರತ್, ರಸ್ತೆ ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವರದಿ ಮಾಡಿದ್ದು, ಇದೀಗ ಆನೇಕಲ್ ಲೋಕೋಪಯೋಗಿ ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ಕಾರದ ಮಟ್ಟದಲ್ಲಿ ಇನ್ನೂ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಇದರ ಮಧ್ಯೆ, ವೆೈಟ್ ಮಿಕ್ಸ್ ಸುರಿಯುವ ಮೂಲಕ ತಾತ್ಕಾಲಿಕವಾಗಿ ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿಗೆ ಜಮೀನಿನವರ ತಕರಾರು ಒಂದೆಡೆ ಇದೆ. ಇನ್ನೊಂದೆಡೆ, ಸಿದ್ದರಾಮಯ್ಯರ ಕಾಲದಲ್ಲಿ ಮಂಜೂರಾತಿ ನೀಡಿದ್ದ 600 ಕೋಟಿ ರೂಪಾಯಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ. ರಸ್ತೆ ಕಾಮಗಾರಿ ವಿಳಂಬಕ್ಕೆ ಇದೂ ಕಾರಣ ಎಂದು ಮಾಜಿ ಜಿ.ಪಂ ಸದಸ್ಯ ಬಳ್ಳೂರು ನಾರಾಯಣಸ್ವಾಮಿ ದೂರಿದ್ದಾರೆ.
ಇದನ್ನೂ ಓದಿ: ದಶಕ ಕಳೆದರೂ ಸರಿಹೋಗದ ಆನೇಕಲ್ ರಸ್ತೆ.. ಸಂಚಾರಿಗಳಿಗೆ ಪ್ರಸವ ವೇದನೆ