ETV Bharat / state

ನೆಲಮಂಗಲ ಪೊಲೀಸರ ಕಾರ್ಯಾಚರಣೆ: ನಾಲ್ವರು ಗಾಂಜಾ ಮಾರಾಟಗಾರರ ಬಂಧನ

ನೆಲಮಂಗಲದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದ ಮಾರಾಟಗಾರರನ್ನು ಬಂಧಿಸಿದ್ದಾರೆ.

author img

By

Published : Sep 4, 2020, 7:26 PM IST

Marijuana accused
Marijuana accused

ನೆಲಮಂಗಲ : ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನೆಲಮಂಗಲ ಪೊಲೀಸರು, ನಾಲ್ವರು ಗಾಂಜಾ ಮಾರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.

ಸಂತೋಷ್ ಚೌಹಾಣ್ (35), ದಾಂಜಿ ಕುಮಾರ್ (25), ಗುರುಪ್ರಸಾದ್ (31) ವರ್ಷ ತ್ಯಾಮಗೊಂಡ್ಲು, ಇರ್ಫಾನ್ ಬಿನ್ ಅಸ್ಗರ್ (21) ಬಂಧಿತ ಆರೋಪಿಗಳು. ಇವರು ರಾಷ್ಟ್ರೀಯ ಹೆದ್ದಾರಿ 4 ತುಮಕೂರು ರಸ್ತೆಯ ಡೆನ್ಸೋ ಫ್ಯಾಕ್ಟರಿ ಪಕ್ಕದ ನರಹರಿ ಎಂಬುವವರಿಗೆ ಸೇರಿದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಪಡೆದ ನೆಲಮಂಗಲ ಪೊಲೀಸರು, ಪಿಎಸ್ಐ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1 ಕೆಜಿ 90 ಗ್ರಾಂ ಗಾಂಜಾ ಹಾಗೂ 700 ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.