ETV Bharat / state

ಹೊಸಕೋಟೆಯಲ್ಲಿ ಎರಡು ಗುಂಪುಗಳ ನಡುವೆ ವಾಟರ್ ಫಿಲ್ಟರ್​ ಪಾಲಿಟಿಕ್ಸ್​ - hoskote latest news

ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಗಣಗಲೂರು ಪಂಚಾಯತ್ ಸಿದ್ದನಪುರ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಎಂಟಿಬಿ ನಾಗರಾಜ್ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದೆ ಎಂದು ಕೆಡವಿ ಹಾಕಿರುವ ಘಟನೆ ನಡೆದಿದೆ.

water
ಹೊಸಕೋಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ವಿಚಾರಕ್ಕೆ ವಾಗ್ವಾದ
author img

By

Published : Aug 8, 2021, 7:38 PM IST

ಹೊಸಕೋಟೆ/ಬೆಂಗಳೂರು ಗ್ರಾಮಾಂತರ:ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರ ನಡುವಿನ ಕಿತ್ತಾಟ ಮತ್ತೆ ಶುರುವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸಂಬಂಧ ಎರಡು ಪಕ್ಷದ ಕಡೆಯವರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಎಂಟಿಬಿ ಬೆಂಬಲಿಗರು ಶುದ್ಧ ಕುಡಿಯುವ ನೀರಿನ ಘಟಕ ಒಡೆದು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೊಸಕೋಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ವಿಚಾರಕ್ಕೆ ವಾಗ್ವಾದ

ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಗಣಗಲೂರು ಪಂಚಾಯತ್ ಸಿದ್ದನಪುರ ಗ್ರಾಮದಲ್ಲಿ ಶಾಸಕರ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಎಂಟಿಬಿ ನಾಗರಾಜ್ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದೆ ಎಂದು ಅಡ್ಡಿಪಡಿಸಿದ್ದಲ್ಲದೆ ಘಟಕ ಕೆಡವಿದ್ದಾರೆ.

ನಂತರದಲ್ಲಿ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನೀರಿನ ಘಟಕ ಕೆಡವಲು ಮುಂದಾದವರ ಮೇಲೆ‌ ದೂರು ನೀಡಿದ್ದಾರೆ.ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಇನ್ನು ಬಿಎಂಆರ್​ಡಿಎ ಸದಸ್ಯ ಮತ್ತು ಎಂಟಿಬಿ ಬೆಂಬಲಿಗ ಸಂತೋಷ್​ ರಸ್ತೆ ಜಾಗದಲ್ಲಿ ಕಟ್ತಿದ್ದೀರಾ ಅಂತ ಗಡಾರಿ‌ಯಿಂದ ಗೋಡೆ ಒಡೆಯುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಶಾಸಕರ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿತ್ತು. ಆ ಘಟಕವನ್ನು ದಾರಿಗೆ‌ ಅಡ್ದಲಾಗಿ ನಿರ್ಮಾಣ ಮಾಡುತ್ತಿರುವುದೇ ಸಮಸ್ಯೆ ಆಗಿದೆ. ಮತ್ತು ಶಾಸಕರ ಅನುದಾನದಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಆಗದೆ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಶರತ್ ಬಚ್ಚೇಗೌಡ ಬೆಂಬಲಿಗರು ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.