ದೇವನಹಳ್ಳಿ: ಜೂನ್ನಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಎಂಎಲ್ಸಿ ಪುಟ್ಟಣ್ಣ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಕೊಂದುಕೊರತೆ ಮತ್ತು ಶಿಕ್ಷಕರ ಸಮಸ್ಯೆ ಆಲಿಸಿದರು.
ಸತತ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಪ್ರವೇಶಿಸಿರುವ ಪುಟ್ಟಣ್ಣ ನಾಲ್ಕನೇ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲು ದೇವನಹಳ್ಳಿ ಭಾಗದ ಶಾಲೆಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಎಂಎಲ್ಸಿ ಪುಟ್ಟಣ್ಣ ಶೈಕ್ಷಣಿಕ ಕ್ಷೇತ್ರ ದೇವಾಲಯಕ್ಕಿಂತ ಮಿಗಿಲಾದದ್ದು ಕ್ಷೇತ್ರ. ನೂರು ದೇವಾಲಯ ಕಟ್ಟುವುದಕ್ಕಿಂತ ಒಂದು ಶಾಲೆ ಕಟ್ಟುವಂತೆ ಹೇಳುತ್ತಾರೆ. ಇಂತಹ ಕ್ಷೇತ್ರವನ್ನು ಬಲಪಡಿಸಬೇಕಿದೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಪಿಎಫ್, ಇಎಸ್ಐ, ಸೌಲಭ್ಯ, ಚೆಕ್ ಮೂಲಕ ಸ್ಯಾಲರಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಈಗ ಎಲ್ಲ ಶಿಕ್ಷಕರಿಗೂ ಹೆಲ್ತ್ ಇನ್ಸೂರೆನ್ಸ್ ಮಾಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ 10 ಲಕ್ಷ ಶಿಕ್ಷಕರಿದ್ದು, ಅವರೆಲ್ಲರ ಸಮಸ್ಯೆಗಳನ್ನ ಹಂತಹಂತವಾಗಿ ಬಗೆಹರಿಸಬೇಕಿದೆ ಎಂದರು. ಈ ಸಲವೂ ಶಿಕ್ಷಕರ ಬೆಂಬಲ ನನಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.