ದೊಡ್ಡಬಳ್ಳಾಪುರ : ಊರಿಗೆ ವಾಪಸ್ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಇದರಿಂದ ಬೇಸತ್ತ ಪತಿ ನೇಣಿಗೆ(Suicide) ಶರಣಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು ರಸ್ತೆಯ ಹಸನಘಟ್ಟ ಕ್ರಾಸ್ ಬಳಿ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ನಂಜುಂಡ (42) ಎಂಬಾತ ನೇಣಿಗೆ ಶರಣಾಗಿದ್ದಾರೆ.
ಮೃತ ವ್ಯಕ್ತಿ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಗ್ರಾಮದ ನಿವಾಸಿಯಾಗಿದ್ದಾರೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಸಿಲ್ವರ್ ಪಾರ್ಕ್‌ನಲ್ಲಿ (Doddaballapur Industrial Area) ಕೆಲಸ ಮಾಡುತ್ತಿದ್ದರು.
ಊರಿಗೆ ವಾಪಸ್ ಹೋಗಿ ಅಲ್ಲಿಯೇ ಜೀವನ ನಡೆಸಬೇಕೆಂಬುದು ಗಂಡನ ಆಸೆ ಇತ್ತಂತೆ. ಆದರೆ, ಹೆಂಡತಿಗೆ ಊರಿಗೆ ವಾಪಸ್ ಹೋಗಲು ಇಷ್ಟವಿರಲಿಲ್ಲವಂತೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇದರಿಂದ ಮನನೊಂದ ಪತಿ ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪುನೀತ್ ಸ್ಫೂರ್ತಿ: ದೇಹದಾನದ ವಾಗ್ದಾನ ಮಾಡಿದ್ರು ಕಾಫಿ ನಾಡಿನ ದಂಪತಿ