ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಯನ್ನು ತರಲಾಗಿದೆ.
ಕೆಐಎಎಲ್ನ ಸ್ವಯಂ ಚಾಲಿತ ಪಾರ್ಕಿಂಗ್ 1, 2 ಮತ್ತು 3ರಲ್ಲಿ ನವೀಕರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 27 ರಿಂದ ಅಕ್ಟೋಬರ್ 29ರ ವರೆಗೂ ಪಾರ್ಕಿಂಗ್ 4 ರಲ್ಲಿ ವಾಹನಗಳ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ. ಪಾರ್ಕಿಂಗ್ 4ರಲ್ಲಿ ಸ್ವಯಂ ಚಾಲಿತ ಪಾರ್ಕಿಂಗ್ ಬದಲಿಗೆ ಮ್ಯಾನುಯಲ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿಮಾನ ನಿಲ್ದಾಣದ ನಿರ್ಗಮನ ಮತ್ತು ಆಗಮನ ಮಾರ್ಗಗಳ ಬದಲಾವಣೆಯನ್ನು ಮಾಡಲಾಗಿದೆ ಎಂದು ಕೆಐಎಎಲ್ನ ಸಂಬಂಧಿತ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.