ಬೆಂಗಳೂರು: ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನ ಸಂಭ್ರಮದಿಂದ ನೆರವೇರಿತು. ಕೃಷ್ಣನ ಜನ್ಮ ದಿನದ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತಾದಿಗಳು ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ದೇವರಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ದೇವಸ್ಥಾನದ ಮುಂದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀವೇಣುಗೋಪಾಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬಳಿಕ ದೇವರ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೊಂಬೆ ಬಳಗ, ಕೀಲು ಕುದುರೆ, ನಾದ ಸ್ವರ, ಡೊಳ್ಳು ಕುಣಿತ, ತಮಟೆ ವಾದನ ಹಾಗೂ ಜನಪದ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು.
ಎಲ್ಲ ಕಡೆ ಕೃಷ್ಣನ ಜನ್ಮ ದಿನದಂದು ಜನ್ಮಾಷ್ಟಮಿ ಆಚರಿಸಿದ್ರೆ, ದೇವನಹಳ್ಳಿಯಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ರೋಹಿಣಿ ನಕ್ಷತ್ರದ ದಿನ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಎಲ್ಲ ಯಾದವ ಸಮೂದಾಯದವರು ಸೇರಿ ಈ ಅದ್ದೂರಿಯಾಗಿ ಜನ್ಮಷ್ಟಾಮಿಯನ್ನು ಆಚರಿಸಿದರು. ಎರಡು ದಿನಗಳ ಕಾಲ ನಡೆದ ಹಬ್ಬದಲ್ಲಿ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಪುರಸಭೆ ಸದಸ್ಯರಾದ ಬಾಂಬೆ ನಾರಾಯಣಸ್ವಾಮಿ ಮತ್ತು ಯಾದವ ಸಂಘದ ಅಧ್ಯಕ್ಷ ಆರ್. ಆರ್. ರಘು, ಉಪಾಧ್ಯಕ್ಷ ಮುನಿರಾಜು ಮತ್ತು ಪದಾಧಿಕಾರಿಗಳು ಹಾಗೂ ಕುಲಬಾಂಧವರು ಸೇರಿ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿ ಹಬ್ಬ ಆಚರಿಸಿದರು.