ETV Bharat / state

ಘಾಟಿ ಸುಬ್ರಹ್ಮಣ್ಯನ ಹುಂಡಿ ಎಣಿಕೆ... ನಿಷೇಧಿತ 1000, 500 ರೂ. ನೋಟು ಸೇರಿ ವಿದೇಶಿ ಕರೆನ್ಸಿ ಪತ್ತೆ! - ಬೆಂಗಳೂರು   ಗ್ರಾಮಾಂತರ ಜಿಲ್ಲೆ,  ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ಹುಂಡಿ ಹಣ ಎಣಿಕೆ, ಕನ್ನಡ ವಾರ್ತೆ ಈಟಿವಿ ಭಾರತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಜುಲೈ ತಿಂಗಳ ಹುಂಡಿ ಹಣ ಎಣಿಕೆ ಕಾರ್ಯ ಭಕ್ತರ ಸಮ್ಮುಖದಲ್ಲಿ ನಡೆಯಿತು. ಹುಂಡಿಯಲ್ಲಿ ಭಾರತೀಯ ರೂಪಾಯಿ ನೋಟುಗಳಲ್ಲದೆ, ಯುರೋಪ್​, ಮಲೇಷಿಯಾ ಅಮೆರಿಕ, ದುಬೈ ಮತ್ತು ಕೀನ್ಯಾ ದೇಶದ ಕರೆನ್ಸಿಗಳು ಪತ್ತೆಯಾಗಿವೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಹಣ ಎಣಿಕೆ
author img

By

Published : Aug 3, 2019, 5:56 AM IST

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಜುಲೈ ತಿಂಗಳ ಹುಂಡಿ‌ ಹಣ ಎಣಿಕೆ ಕಾರ್ಯವನ್ನು ಘಾಟಿ ದೇವಸ್ಥಾನದ ಆವರಣದಲ್ಲಿ ಮಾಡಲಾಯಿತು. ಭಕ್ತರಿಗೂ ಹಣ ಎಣಿಕೆ ಕಾರ್ಯದ ಅವಕಾಶವನ್ನು ದೇವಸ್ಥಾನ ಆಡಳಿತ ಮಂಡಳಿ ನೀಡಿತ್ತು.

ದೇವರ ಹುಂಡಿಯಲ್ಲಿ 31,48,636 ರೂ. ಹಣ ಸಂಗ್ರಹವಾಗಿದೆ. ಜೊತೆಗೆ ಯೂರೋಪ್, ಮಲೇಷಿಯಾ, ಅಮೆರಿಕ, ದುಬೈ ಮತ್ತು ಕೀನ್ಯಾ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಅಲ್ಲದೆ, ಹುಂಡಿಯಲ್ಲಿ ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಸಹ ಕಂಡುಬಂದಿವೆ. 8 ಗ್ರಾಂ ಚಿನ್ನ, 1460 ಗ್ರಾಂ ಬೆಳ್ಳಿ ವಸ್ತುಗಳು ದೇವಸ್ಥಾನಕ್ಕೆ ಕಾಣಿಕೆಯಾಗಿ ಬಂದಿವೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಹಣ ಎಣಿಕೆ

ರಜೆ ಮುಗಿದ ಬೆನ್ನಲ್ಲೇ ಪ್ರವಾಸಿಗರು, ಭಕ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಹಿನ್ನೆಲೆ ಬೆಳ್ಳಿ ವಸ್ತುಗಳು ಸೇರಿದಂತೆ ಕಾಣಿಕೆಯಲ್ಲಿ ಗಣನೀಯ ಕುಸಿತ ಕಂಡಿದೆ. ಕಳೆದ ತಿಂಗಳು 48,14,833 ಹಣ ಮತ್ತು ಇತರೆ ವಸ್ತುಗಳು ಸಂಗ್ರಹವಾಗಿದ್ದವು. ಅಡಳಿತಾಧಿಕಾರಿ ಸಮ್ಮಖದಲ್ಲಿ ಹಣ ಎಣಿಕೆ ಕಾರ್ಯ ನಡೆಯಿತು. ಹುಂಡಿ ಹಣ ಎಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮರಾದಲ್ಲಿ ಸೆರೆ ಹಿಡಲಾಯಿತು.

Intro:ಘಾಟಿ ಕ್ಷೇತ್ರದಲ್ಲಿ ಭಕ್ತರ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ
Body:ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ಭಕ್ತರ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.

ಜುಲೈ ತಿಂಗಳ ಹುಂಡಿ‌ಹಣ ಎಣಿಕೆ ಕಾರ್ಯವನ್ನು ಘಾಟಿ ದೇವಸ್ಥಾನದ ಆವರಣದಲ್ಲಿ ಮಾಡಲಾಯಿತು. ಭಕ್ತರಿಗೂ ಹಣ ಎಣಿಕೆ ಕಾರ್ಯದ ಅವಕಾಶವನ್ನು ದೇವಸ್ಥಾನ ಆಡಳಿತ ಮಂಡಳಿ ನೀಡಿತ್ತು.
ದೇವರ ಹುಂಡಿಯಲ್ಲಿ 31,48,636 ರೂ ಹಣ ಸಂಗ್ರಹವಾಗಿದ್ದು. ಯೂರೋಪ್, ಮಲೇಷಿಯಾ, ಅಮೇರಿಕಾ, ದುಬೈ ಮತ್ತು ಕೀನ್ಯಾ ದೇಶದ ಕರೆನ್ಸಿಗಳು ಪತ್ತೆಯಾಗಿದೆ. ಜೊತೆಜೊತೆಗೆ ಹುಂಡಿಯಲ್ಲಿ ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಸಹ ಪತ್ತೆಯಾಗಿದೆ.

8 ಗ್ರಾಂ ಚಿನ್ನ, 1460 ಗ್ರಾಂ ಬೆಳ್ಳಿ ವಸ್ತುಗಳು ಈ ತಿಂಗಳು ದೇವಸ್ಥಾನಕ್ಕೆ ಕಾಣಿಕೆಯಾಗಿ ಬಂದಿದೆ.ರಜೆ ಮುಗಿದ ಬೆನ್ನಲ್ಲೇ ಪ್ರವಾಸಿಗರು, ಭಕ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಹಿನ್ನಲೆ ಬೆಳ್ಳಿ ವಸ್ತುಗಳು ಸೇರಿದಂತೆ ಕಾಣಿಕೆಯಲ್ಲಿ ಗಣನೀಯ ಕುಸಿತಕೊಂಡಿದೆ.ಕಳೆದ ತಿಂಗಳು 48,14,833 ಹಣ ಮತ್ತು ಇತರೆ ವಸ್ತುಗಳು ಸಂಗ್ರಹವಾಗಿತ್ತು . ಅಡಳಿತಾಧಿಕಾರಿ ಸಮ್ಮಖದಲ್ಲಿ ಹಣ ಎಣಿಕೆ ಕಾರ್ಯ ನಡೆಯಿತು.ಹುಂಡಿ ಹಣ ಏಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಲಾಯಿತು.

Conclusion:null

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.