ETV Bharat / state

ಪ್ರಭಾವಿ ವ್ಯಕ್ತಿಗಳಿಂದ ಪ್ರಮುಖ ರಸ್ತೆ ಒತ್ತುವರಿ: ಗ್ರಾಮಸ್ಥರ ಆಕ್ರೋಶ - Honnaghatta village main road problem

ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಘಟ್ಟ ಗ್ರಾಮದ ಮಧ್ಯದಲ್ಲಿ ಹಾದುಹೋಗಿರುವ ಪ್ರಮುಖ ರಸ್ತೆಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

honnaghatta-village-main-road-problem
ಪ್ರಭಾವಿ ವ್ಯಕ್ತಿಗಳಿಂದ ಪ್ರಮುಖ ರಸ್ತೆ ಒತ್ತುವರಿ: ಗ್ರಾಮಸ್ಥರ ಆಕ್ರೋಶ
author img

By

Published : Jan 28, 2021, 7:48 AM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ತಾಲೂಕಿನ ಹೊನ್ನಘಟ್ಟ ಗ್ರಾಮದ ಮಧ್ಯದಲ್ಲಿ ಹಾದು ಹೋಗಿರುವ ಪ್ರಮುಖ ರಸ್ತೆಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರಸ್ತೆ ಕಾಮಗಾರಿಯನ್ನು ಜೆಸಿಬಿಯಿಂದ ಅಗೆದಿದ್ದು, ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳಿಂದ ಪ್ರಮುಖ ರಸ್ತೆ ಒತ್ತುವರಿ: ಗ್ರಾಮಸ್ಥರ ಆಕ್ರೋಶ

ಹೊನ್ನಘಟ್ಟ ಮತ್ತು ಕೊಳೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭವಾಗಿತ್ತು. ರಸ್ತೆಗೆ ಜಲ್ಲಿ ಹಾಸು ಕೂಡ ಹಾಕಲಾಗಿದ್ದು, ಕೆಲವೇ ದಿನಗಳಲ್ಲಿ ರಸ್ತೆ ಡಾಂಬರೀಕರಣ ಆಗಬೇಕಿತ್ತು. ಆದರೆ, ಗ್ರಾಮದ ಪ್ರಭಾವಿ ವ್ಯಕ್ತಿಗಳು ರಸ್ತೆಯ ಒಂದು ಬದಿಯನ್ನ ಒತ್ತುವರಿ ಮಾಡಿರುವುದನ್ನು ಪ್ರಶ್ನಿಸಿದ್ದಕ್ಕೆ ರಸ್ತೆ ಕಾಮಗಾರಿಯನ್ನ ಜೆಸಿಬಿಯಿಂದ ಅಗೆದಿದ್ದಾರೆ. ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.

ಹೊನ್ನಘಟ್ಟ ಗ್ರಾಮದ ಸರ್ಕಾರಿ ಶಾಲೆಯಿಂದ ಕೊಳೂರು ರಸ್ತೆಯವರೆಗೂ ಸುಮಾರು 10 ರಿಂದ 4 ಅಡಿಗಳಷ್ಟು ರಸ್ತೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಪರಿಣಾಮ ರಸ್ತೆಯ ಮತ್ತೊಂದು ಬದಿಯಲ್ಲಿರುವ ಗ್ರಾಮಸ್ಥರ ಜಮೀನು ರಸ್ತೆಗೆ ಸೇರಿದೆ. ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರು ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ.

ಓದಿ: ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಕೆ

ಸ್ಥಳಕ್ಕೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಶಿವರಾಜ್ ಮತ್ತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಹಳ ವರ್ಷಗಳಿಂದ ಸಾರ್ವಜನಿಕ ರಸ್ತೆಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಇದೇ ಸ್ಥಳದಲ್ಲಿ ಗುಂಡುತೋಪು ಮತ್ತು ಬಿ ಖಾರಪ್ ಇದ್ದು, ರಸ್ತೆ ನಿರ್ಮಾಣಕ್ಕೆ ಈ ಜಾಗವನ್ನು ಬಳಸಲಾಗುವುದು. ರಸ್ತೆಯನ್ನ ಹಾಳು ಮಾಡಿದವರ ವಿರುದ್ದ ಎಫ್​​ಐಆರ್ ದಾಖಲಾಗಿದೆ. ಸರ್ವೆ ಅಧಿಕಾರಿಗಳಿಂದ ಸರ್ಕಾರಿ ಜಾಗವನ್ನು ಗುರುತಿಸಿ, ರಸ್ತೆ ಸಮಸ್ಯೆ ಬಗ್ಗೆ ಹರಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.