ಬೆಂಗಳೂರು: ದೇವನಹಳ್ಳಿಯ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ, ನಲ್ಲೂರು, ಜೊನ್ನಹಳ್ಳಿ, ಬೆಟ್ಟಕೋಟೆ ಸುತ್ತಮುತ್ತ ಇಂದು ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲ, ತೋಟಗಳಲ್ಲಿ ನೀರು ತುಂಬಿದೆ. ಮಳೆಯಿಂದಾಗಿ ವಿಜಯಪುರದಲ್ಲಿ ರೈತರು ಬೆಳೆದ ತರಕಾರಿ, ಬಾಳೆ ಗಿಡಗಳು, ಮಾವಿನ ಬೆಳೆಗಳಿಗೆ ಹಾನಿ ಉಂಟಾಗಿವೆ.
ಹಲವು ಕಡೆ ಸಾಧಾರಣ ಗುಡುಗು ಸಹಿತ ಮಳೆಯಾಗಿದ್ದು, ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ಜನರಲ್ಲಿ ಸಂತೋಷ ಮೂಡಿಸಿದೆ.