ದೇವನಹಳ್ಳಿ/ಬೆಂಗಳೂರು: ಕೆಐಎಎಲ್ನಲ್ಲಿ ಎಲಿವೇಟರ್ ಪದದ ಕನ್ನಡದ ಅನುವಾದವಾಗಿ 'ಏರಿಳಿ ತೇರು' ಎಂಬ ಪದ ಬಳಕೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ ನೆಟ್ಟಿಗರು ನಿಖರ ಪದ ಬಳಸುವಂತೆ ಮನವಿ ಮಾಡಿದ್ದು, ಏರ್ಪೋರ್ಟ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಪತ್ರಕರ್ತ ಸುಗತ ಶ್ರೀನಿವಾಸ್ ಅವರು ಏರಿಳಿ ತೇರು ಪದ ಬಳಕೆ ಬಗ್ಗೆ ಡಿಸೆಂಬರ್ 14 ರಂದು ಟ್ವೀಟ್ ಮಾಡಿ ಬೆಂಗಳೂರು ಏರ್ಪೋರ್ಟ್ಗೆ ಟ್ಯಾಗ್ ಮಾಡಿದ್ದರು. ಎಲಿವೇಟರ್ನ ಕನ್ನಡ ಪದವಾಗಿ ಏರಿಳಿ ತೇರು ಪದ ಬಳಸಿದ್ದಾರೆ. ಇದರ ಅರ್ಥ ರಥವು ಮೇಲಕ್ಕೆ ಮತ್ತು ಕೆಳಗೆ ಹೋಗುತ್ತದೆ ಎಂದಾಗುತ್ತದೆ. ಹಾಗಾದರೆ, ರಥವು ಯಾವಾಗ ಏರಿತು, ಇಳಿಯಿತು ಎಂದು ಅವರು ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚು ಸೂಕ್ತವಾದ ಪದವನ್ನು ಬಳಸುವಂತೆ ಮತ್ತು ಸರಳವಾಗಿ ಲಿಫ್ಟ್ ಪದ ಬಳಸುವಂತೆ ಅವರು ಮನವಿ ಮಾಡಿದ್ದರು. ಇದನ್ನು ನೆಟ್ಟಿಗರು ಸಹ ಪ್ರಶ್ನೆ ಮಾಡಿದ್ದರು.
![elevator word translated into kannada](https://etvbharatimages.akamaized.net/etvbharat/prod-images/kn-bng-05-elevator-av-ka10057_28122022165153_2812f_1672226513_490.jpg)
ಈ ವಿಚಾರವಾಗಿ ಡಿಸೆಂಬರ್ 27ರಂದು ಪ್ರತಿಕ್ರಿಯಿಸಿರುವ ಏರ್ಪೋರ್ಟ್ ಅಧಿಕಾರಿಗಳು, ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ನಮ್ಮ ತಂಡ ಪರಿಶೀಲನೆ ನಡೆಸಿ ಸರಿಪಡಿಸುವುದಾಗಿ ಹೇಳಿದೆ. ಏರಿಳಿ ತೇರು ಪದ ಕೈಬಿಟ್ಟು ಎಲಿವೇಟರ್ ಪದವನ್ನು ಬಳಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಹಿನ್ನೆಲೆ: ಪಬ್ ಅಂಡ್ ರೆಸ್ಟೋರೆಂಟ್, ಪಿ.ಜಿ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಿದ ಪೊಲೀಸರು