ETV Bharat / state

ಕೊರೊನಾ ವೈರಸ್​​​​​​​​​​ಗೆ ಕಡಿವಾಣ ಹಾಕಿದ 'ವೈದ್ಯರ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ - ಕಂದಾಯ ಸಚಿವ ಆರ್.ಅಶೋಕ್

ಮೇ 17ರಂದು ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ 'ವೈದ್ಯರ ನಡೆ ಹಳ್ಳಿಯ ಕಡೆಗೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಕಡಿಮೆಯಾಗಿದ್ದು, ಹಳ್ಳಿಗಳಲ್ಲಿನ ವೃದ್ಧರು ಮತ್ತು ವಿಶೇಷ ಚೇತನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ.

Devanahalli
'ವೈದ್ಯರ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ
author img

By

Published : Jun 5, 2021, 8:54 AM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ 'ವೈದ್ಯರ ನಡೆ ಹಳ್ಳಿಯ ಕಡೆ' ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಗೊಳಿಸಲಾಯಿತು. ಇದರಿಂದ ಕೊರೊನಾ ವೈರಸ್ ಹರಡುವಿಕೆಗೆ ಕಡಿಮೆಯಾಗಿದ್ದು, ಕಾರ್ಯಕ್ರಮ ಯಶಸ್ಸಿಯಾಗಿದ್ದಕ್ಕೆ ಈಗ ರಾಜ್ಯಾದ್ಯಂತ ಜಾರಿ ಮಾಡಲಾಗಿದೆ.

ಕೊರೊನಾ ವೈರಸ್​​​​​​​​​​ಗೆ ಕಡಿವಾಣ ಹಾಕಿದ 'ವೈದ್ಯರ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ

ಮೇ 17ರಂದು ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೈದ್ಯರು, ನರ್ಸ್​ಗಳು ಮತ್ತು ಅಂತಿಮ ವರ್ಷದ ವೈದಕೀಯ ವಿದ್ಯಾರ್ಥಿಗಳು ಕೊರೊನಾ ವಾರಿಯರ್ಸ್ ಆಗಿ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುವರು. ಬಳಿಕ ಆ ಹಳ್ಳಿಗಳಲ್ಲಿ ಮೊಬೈಲ್ ಕ್ಲಿನಿಕ್ ತೆರೆದು ಮುಖ್ಯವಾಗಿ ಸೋಂಕಿನ ಲಕ್ಷಣಗಳಿರುವವರಿಗೆ ಪರೀಕ್ಷೆ ನಡೆಸಿ, ಕೊರೊನಾ ಸೊಂಕು ದೃಢಪಟ್ಟರೆ ಸಮೀಪದ ಕೋವಿಡ್ ಕೇರ್ ಸೆಂಟರ್​ಗೆ ಕಳಿಸುವುದು. ಇಲ್ಲವೇ ಮನೆಯಲ್ಲಿಯೇ ಸೂಕ್ತ ವ್ಯವಸ್ಥೆಯಿದ್ದರೆ ಅಲ್ಲಿಯೇ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಳ್ಳುವುದು. ಸೋಂಕಿತರಿಗೆ ಮೆಡಿಕಲ್ ಕಿಟ್ ನೀಡುವುದನ್ನು ಮಾಡುತ್ತಿದ್ದಾರೆ.

ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ವೈದ್ಯರ ತಂಡ ಎರಡು ಬಾರಿ ಭೇಟಿ ನೀಡಿ, ಜನರ ತಪಾಸಣೆ ಮಾಡಿದೆ. ಈ ವೇಳೆ 1,02,907 ಜನರನ್ನು ಪರೀಕ್ಷೆ ಮಾಡಲಾಗಿದೆ. 17,910 ಜನರಿಗೆ ಆರ್​​​​​​​ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 2,004 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುವುದನ್ನು ತಡೆಯಲು ಅನುಕೂಲವಾಗಿದೆ. ಮುಖ್ಯವಾಗಿ ಈ ಕಾರ್ಯಕ್ರಮದಿಂದ ಕೊರೊನಾ ಸೋಂಕಿನ ಚೈನ್ ಲಿಂಕ್​​ ಬ್ರೇಕ್ ಮಾಡಲು ಸಹಕಾರಿಯಾಗಿದೆ. ಹಳ್ಳಿಗಳಲ್ಲಿನ ವೃದ್ಧರು ಮತ್ತು ವಿಶೇಷ ಚೇತನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸೋಂಕನ್ನು ನಿರ್ಲಕ್ಷ್ಯ ಮಾಡುವವರೂ ಸಹ ಹಳ್ಳಿಗೆ ಆರೋಗ್ಯ ಸಿಬ್ಬಂದಿ ಬಂದಾಗ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿರುವುದು ಗಮನಾರ್ಹ ವಿಷಯವಾಗಿದೆ.

ಓದಿ: ಬಲವಂತವಾಗಿ ಸೊಸೆಯನ್ನ ಅಪ್ಪಿಕೊಂಡು ಆಕೆಗೂ ವೈರಸ್​ ಅಂಟಿಸಿದ ಕೋವಿಡ್​ ಸೋಂಕಿತ ಅತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.