ETV Bharat / state

ಬೀರುವಿನಲ್ಲಿದ್ದ ಚಿನ್ನ ದೋಚಿ ಕಳ್ಳರ ಕಾರುಬಾರು: ತಡವಾಗಿ ಬೆಳಕಿಗೆ ಬಂತು ಪ್ರಕರಣ - ಈಟಿವಿ ಭಾರತ ಕನ್ನಡ

ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 4 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

devanahalli-gold-ornament-theft-case
ಬೀರುವಿನಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ತಡವಾಗಿ ಪ್ರಕರಣ ದಾಖಲಿಸಿದ ಪೊಲೀಸರು
author img

By

Published : Dec 5, 2022, 8:05 PM IST

ದೇವನಹಳ್ಳಿ: ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 4 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆ ದೇವನಹಳ್ಳಿಯ ತಾಲೂಕಿನ ನಿಲೇರಿ ಗ್ರಾಮದಲ್ಲಿ ನಡೆದಿದೆ. ಒಂದು ತಿಂಗಳ ಬಳಿಕ ಈ ಕುರಿತು ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಂತ್ರಸ್ತ ಮಹಿಳೆ ದೂರಿದ್ದಾರೆ.

ಗ್ರಾಮದ ನಂದಿಬೆಟ್ಟ ರಸ್ತೆ ಬಳಿಯ ತೋಟದ ಮನೆಯಲ್ಲಿ ಲೀಲಾವತಿ ಎಂಬವರು ವಾಸವಾಗಿದ್ದರು. ಅಕ್ಟೋಬರ್‌ 24ರಂದು ದೀಪಾವಳಿ ಹಬ್ಬಕ್ಕೆಂದು ಒಡವೆ ಧರಿಸಲು ಮನೆಯ ಬೀರುವಿನ ಬಾಗಿಲು ತೆಗೆದಿದ್ದಾರೆ. ಈ ವೇಳೆ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ ಪೊಲೀಸರು ಮೀನಮೇಷ ಎಣಿಸಿದ್ದಾಗಿ ಮಹಿಳೆ ತಿಳಿಸಿದ್ದಾರೆ. 27 ಗ್ರಾಂ ಚಿನ್ನದ ನೆಕ್ಲೇಸ್, 30 ಗ್ರಾಂ ಪದಕ ಚೈನು, 3 ಜೊತೆ ಓಲೆಗಳು ಸೇರಿ 96 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಪಾರ್ಶ್ವವಾಯು ಪೀಡಿತ ಪತ್ನಿ ಸಾಕಲಾರದೇ ನೀರಿನ ಸಂಪ್​ಗೆ ತಳ್ಳಿ ಕೊಂದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.