ETV Bharat / state

ಋಣಮುಕ್ತ ಯೋಜನೆ ಲಾಭ ಪಡೆಯಲು ಮುಗಿಬಿದ್ದ ಜನ... ಅರ್ಜಿ ಸ್ವೀಕರಿಸುವಲ್ಲಿ ಅಧಿಕಾರಿಗಳು ಹೈರಾಣ - Devanahalli, Bangalore Rural District

ಸಮ್ಮಿಶ್ರ ಸರ್ಕಾರದ ಕೊನೆ ಗಳಿಗೆಯಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ಘೋಷಿಸಿದ್ದ, ಋಣಮುಕ್ತ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಅರ್ಜಿ ಸಲ್ಲಿಸಲು ಯೋಜನೆಯ ಫಲಾನುಭವಿಗಳು ತಾಲೂಕು ಕಚೇರಿಗಳಿಗೆ ಮುಗಿಬಿದ್ದಿದ್ದಾರೆ. ಜನರನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.

ಅರ್ಜಿ ಸ್ವೀಕರಿಸುವಲ್ಲಿ ಹೈರಾಣದ ಅಧಿಕಾರಿಗಳು
author img

By

Published : Sep 6, 2019, 8:37 PM IST

ಬೆಂಗಳೂರು: ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಋಣ ಮುಕ್ತ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಮುಗಿಬಿದ್ದಿದ್ದು, ಜನರಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಕೊನೆಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದ ಋಣಮುಕ್ತ ಕಾಯ್ದೆಯ ಲಾಭ ಪಡೆಯಲು ಜನರು ನಾಮುಂದು ತಾಮುಂದು ಎಂದು ತಾಲೂಕು ಕಚೇರಿಗೆ ಮುಗಿಬಿದ್ದಿದ್ದು, ಅಡಮಾನ ಇಟ್ಟು ಪಡೆದಿದ್ದ ಸಾಲದಿಂದ ಮುಕ್ತರಾಗಲು ತುದಿಗಾಲಲ್ಲಿ ನಿಂತಿದ್ದಾರೆ.

ಅರ್ಜಿ ಸ್ವೀಕರಿಸುವಲ್ಲಿ ಹೈರಾಣದ ಅಧಿಕಾರಿಗಳು

ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ 90 ದಿನಗಳ ಗಡುವು ನೀಡಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದ್ದು ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ. ಇದರಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಇನ್ನು ಕೇವಲ 30 ದಿನಗಳ ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಿ ಸಮಯ ಮೀರುತ್ತೊ ಅನ್ನೋ ಆತಂಕ ಜನರಲ್ಲಿದೆ. ಅರ್ಜಿ ಸಲ್ಲಿಸಲು ಜನರು ತಾಲೂಕು ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದು, ಸಾಲಗಾರರು ನೀಡುವ ಅರ್ಜಿಯನ್ನು ಪಡೆದುಕೊಳ್ಳುವುದಲ್ಲದೇ ಜನರ ಆತುರಕ್ಕೆ ಸ್ಪಂದಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.

Intro:KN_BNG_01_06_runamuktha_Ambarish_7203301
Slug: ಋಣಮುಕ್ತ ಯೋಜನೆಯ ಲಾಭ ಪಡೆಯಲು ಮುಗಿ ಬಿದ್ದ ಜನ
ತಾಲೂಕು ಕಚೇರಿಗಳಲ್ಲಿ ಸಾಲುಗಟ್ಟಿರುವ ಜನರಿಗೆ ಸ್ಪಂದಿಸುವಲ್ಲಿ ಹೈರಾಣಾದ ಅಧಿಕಾರಿಗಳು

ಬೆಂಗಳೂರು: ಸಾಲು ಗಟ್ಟಿ ನಿಂತಿರುವ ಜನರು.. ಕೌಂಟರ್ ನಲ್ಲಿ ಜನರು ನೀಡುತ್ತಿರುವ ಅರ್ಜಿಯನ್ನು ಪರಿಶೀಲಿಸಿ ತೆಗೆದುಕೊಳ್ಳುವಲ್ಲಿ ಸುಸ್ತಾಗಿ ಕಾಣುವ ಅಧಿಕಾರಿ.. ಎಲ್ಲಿ ನಮ್ಮ ಅರ್ಜಿ‌ ಮಿಸ್ಸಾಗುತ್ತದೋ ಅನ್ನೋ ಭಯದಲ್ಲಿ‌ ನೂಕು ನುಗ್ಗಲು ಮಾಡುತ್ತಿರುವ ಸಾಲಗಾರರು.. ಇದು ಕಂಡು ಬಂದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ..

ಯೆಸ್, ಸಮ್ಮಿಶ್ರ ಸರ್ಕಾರದ ಕೊನೆ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜಾರಿಗೆ ತಂದಿದ್ದ ಋಣಮುಕ್ತ ಕಾಯಿದೆಯ ಲಾಭ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾಮುಂದು ತಾಮುಂದು ಎಂದು ತಾಲೂಕು ಕಚೇರಿಗಳಿಗೆ ಮುಗಿಬಿದ್ದಿದ್ದಾರೆ. ದೇವನಹಳ್ಳಿ ಸೇರಿದಂತೆ ಎಲ್ಲಾ ತಾಲೂಕು ಕಚೇರಿ ಬಳಿ ಅರ್ಜಿ ಪಡೆಯಲು ಜನರು ಸಾಲುಗಟ್ಟಿ ನಿಂತು ತಾವು ಅಡಮಾನ ಇಟ್ಟು ಪಡೆದಿದ್ದ ಸಾಲದಿಂದ ಮುಕ್ತರಾಗಲು ತುದಿಗಾಲಲ್ಲಿ ನಿಂತು ತಮ್ಮ ಮೇಲಿನ ಸಾಲದ ಹೊರೆ ಇಳಿಸಿಕೊಳ್ಳಲು ಮುಂದಾಗಿದ್ದಾರೆ.

ಅಲ್ಲದೇ ಸರ್ಕಾರ 90 ದಿನಗಳ ಗಡುವು ನೀಡಿದ್ರೂ, ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾರಿಗೆ ಬಂದಿದ್ದು ಕಳೆದ ನಾಲ್ಕೈದು ದಿನಗಳ ಹಿಂದೆ.. ಇವರಿಗೆ ಸಿಕ್ಕಿರುವ ಕಾಲಾವಧಿ ಕೇವಲ ಒಂದು ತಿಂಗಳು.. 90 ದಿನ ಇರುವಾಗ್ಲೇ ಜನರು ಆತಂಕ ಪಟ್ಟಿದ್ರು.. ಆದರೆ ಈ ಜೆಲ್ಲೆಗೆ 30 ದಿನಗಳ ಅವದಿ ಇದ್ದು ಸಾಲಗಾರರು ಎಲ್ಲಿ ಕಾಲದ‌ ಮಿತಿ ಮೀರುತ್ತೊ ಅನ್ನೋ ಭಯದಲ್ಲಿ ಈ ರೀತಿ ತರಾತುರಿಗೆ ಮುಂದಾಗಿದ್ದಾರೆ.. ಇದರಿಂದ ಸಾಲಗಾರರು ನೀಡುವ ಅರ್ಜಿಯನ್ನು ಪಡೆದುಕೊಳ್ಳುವುದಲ್ಲದೇ ಜನರ ಆತುರಕ್ಕೆ ಸ್ಪಂದಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.

Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.