ದೊಡ್ಡಬಳ್ಳಾಪುರ: ಗ್ರಾಮೀಣ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಮಾದರಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ.
ಈ ಮಾದರಿ ಶೌಚಾಲಯಗಳ ನಿರ್ಮಾಣ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದೆ. ಶೌಚಾಲಯಗಳನ್ನು ತಯಾರಿಸುವ ಕೈಗಾರಿಕೆ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿಯ ಕೈಗಾರಿಕೆ ಪ್ರದೇಶದಲ್ಲಿ ಅಹಿರಿ ಸಂಯೋಗದೊಂದಿಗೆ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಮಾದರಿ ಶೌಚಾಲಯಗಳು ನಿರ್ಮಾಣವಾಗುತ್ತಿವೆ. ಸಚಿವರು ರೆಡಿಮೇಡ್ ಮಾದರಿ ಶೌಚಾಲಯಗಳ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಇದೇ ವೇಳೆ ನಿರ್ಮಾಣ ಆಗುತ್ತಿರುವ ಶೌಚಾಲಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆ ನೀಡಿದರು.
ಕಲ್ಯಾಣ ಕರ್ನಾಟಕದಲ್ಲಿ 400 ಸಮುದಾಯ ಶೌಚಾಲಯ ಅಳವಡಿಕೆ; ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮಾದರಿ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದ ಆಯ್ದ ಹಳ್ಳಿಗಳಲ್ಲಿ ರೆಡಿಮೆಡ್ ಮಾದರಿಯ ನೈರ್ಮಲ್ಯ ಸಮುದಾಯ ಶೌಚಾಲಯಗಳನ್ನು ಅಳವಡಿಸಲಾಗುತ್ತಿದೆ. ಈ ವರ್ಷದಲ್ಲಿ ಇಡೀ ಕಲ್ಯಾಣ ಕರ್ನಾಟಕದಲ್ಲಿ 400 ಸಮುದಾಯ ಶೌಚಾಲಯಗಳನ್ನು ಅಳವಡಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹಾಕಿಕೊಂಡಿದೆ.
ಮಹಿಳೆಯರಿಗಾಗಿ ಬಂಟ್ವಾಳದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣ; ವಿಶ್ರಾಂತಿ ಕೊಠಡಿ,ಸ್ಯಾನಿಟರಿ ನ್ಯಾಪ್ಕಿನ್ ವ್ಯವಸ್ಥೆ, ತಾಯಂದಿರು ದೂರದೂರಿನಿಂದ ಮಕ್ಕಳೊಂದಿಗೆ ಬರುವವರಿಗೆ ಹಾಲುಣಿಸುವ ಸೌಲಭ್ಯ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ. ಜೊತೆಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸ್ಸಿಂಗ್ ರೂಂ.. ಇಷ್ಟೆಲ್ಲ ಸೌಲಭ್ಯವನ್ನು ಒಂದೇ ಸೂರಿನಡಿ ಮಹಿಳೆಯರಿಗೆ ಪಿಂಕ್ ಟಾಯ್ಲೆಟ್ದಲ್ಲಿ ಕಲ್ಪಿಸುವ ಸರ್ಕಾರದ ಯೋಜನೆ ಉದ್ದೇಶ ಆಗಿದೆ.
ರಾಜ್ಯ ಸರ್ಕಾರ ಮಹಿಳೆಯರ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಪಿಂಕ್ ಟಾಯ್ಲೆಟ್ ಯೋಜನೆ ಜಾರಿಗೊಳಿಸಿತ್ತು. ಸರ್ಕಾರ ಮೈಸೂರಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಿಸಿ ಇತ್ತೀಚೆಗೆ ಚಾಲನೆ ನೀಡಿತ್ತು. ಪಿಂಕ್ ಟಾಯ್ಲೆಟ್ ಇದೀಗ ಬಂಟ್ವಾಳದಲ್ಲಿ ತಲೆಎತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದ್ದು ಎಂಬ ಹೆಗ್ಗಳಿಕೆ ಪಡೆದಿದೆ.
ಅದರ ಮಹತ್ವವನ್ನು ಗಮನಿಸಿದ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಬಂಟ್ವಾಳದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಿಸುವ ಯೋಜನೆಯ ಕುರಿತು ರೂಪುರೇಷೆ ತಯಾರಿಸಿದರು. ಹೀಗಾಗಿ ಬಂಟ್ವಾಳ ತಾಲೂಕು ಆಡಳಿತ ಸೌಧ (ಹಿಂದಿನ ಮಿನಿ ವಿಧಾನಸೌಧ)ದ ಗೇಟಿನ ಪಕ್ಕದಲ್ಲೇ ಫುಟ್ ಪಾತ್ ಇರುವ ಜಾಗದ ಸನಿಹದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣವಾಗಿದೆ.
ಅಮೃತ ನಿರ್ಮಲ ನಗರ ಯೋಜನೆಯಡಿ ಬಂಟ್ವಾಳ ಪುರಸಭೆಗೆ ಬಂದ 1 ಕೋಟಿ ರೂ ಅನುದಾನದಲ್ಲಿ 25.5 ಲಕ್ಷ ರೂ. ವೆಚ್ಚದಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗಿದೆ.
ಇದನ್ನೂಓದಿ:ಗಂಗಾವತಿ: ನೂತನ ಕಿಷ್ಕಿಂಧಾ ಜಿಲ್ಲೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಮನವಿ