ETV Bharat / state

ಸೈನಿಕರಿಗೆ ಬೆಣ್ಣೆ, ಅರೆಸೇನಾ ಪಡೆ ಯೋಧರಿಗೆ ಸುಣ್ಣ.. ದೇಶ ಕಾಯೋರ ನಡುವೆ ತಾರತಮ್ಯ ಆರೋಪ.. - ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಸುದ್ದಿಗೋಷ್ಠಿ

ಆರ್ಮಿ, ನೇವಿ ಮತ್ತು ಏರ್ ಪೋರ್ಸ್ ಪಡೆಗಳ ಮುಖ್ಯಸ್ಥರು ಅಲ್ಲಿನ ಅಧಿಕಾರಿಗಳು ಆಗಿರುವುದರಿಂದ ಅವರು ಸೈನಿಕರ ಹಿತಾ ಕಾಯುತ್ತಾರೆ, ಅರೆಸೇನಾ ಪಡೆಗಳ ಮುಖ್ಯಸ್ಥರು ಐಪಿಎಸ್ ಅಧಿಕಾರಿಗಳು, ಅರೆಸೇನಾ ಪಡೆಯ ಯೋಧರ ಸಮಸ್ಯೆಗಳನ್ನ ತಿಳಿಯುವಷ್ಟರಲ್ಲಿ ಅವರ ವರ್ಗಾವಣೆಯಾಗಿರುತ್ತೆ ಆದ್ದರಿಂದ ಅರೆಸೇನಾ ಪಡೆಯ ಅಧಿಕಾರಿಗಳೇ ಮುಖ್ಯಸ್ಥರಾಗ ಬೇಕು ಎಂದು ಹನುಮಂತರಾಜು ಆಗ್ರಹಿಸಿದರು..

ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಸುದ್ದಿಗೋಷ್ಠಿ

author img

By

Published : Feb 20, 2022, 4:28 PM IST

ದೊಡ್ಡಬಳ್ಳಾಪುರ : ದೇಶವನ್ನು ಕಾಯುವ ಯೋಧರಿಗೆ ನೀಡುವ ಸರ್ಕಾರಿ ಸವಲತ್ತಿನಲ್ಲಿ ತಾರತಮ್ಯ ಇದೆ. ಸೈನಿಕರಿಗೆ ಸಿಗುತ್ತಿರುವ ಸರ್ಕಾರದ ಸೌಲಭ್ಯಗಳು ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿಲ್ಲ. ಸೈನಿಕರಿಗೆ ಸಿಗುವ ಸೌಲಭ್ಯ ಅರೆಸೇನಾ ಪಡೆಯ ಯೋಧರಿಗೂ ಸಿಗುವಂತೆ ಒತ್ತಾಯಿಸಿ ಬಹಳ ವರ್ಷಗಳಿಂದ ಮಾಜಿ ಅರೆಸೇನಾ ಪಡೆಯ ಯೋಧರು ಹೋರಾಟ ಮಾಡುತ್ತಿದ್ದಾರೆ.

ಈ ಕುರಿತು ನಗರದ ರಾಜಕುಮಾರ್ ಕಲಾಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ, ಹಲವು ವರ್ಷಗಳಿಂದ ನಡೆಯುತ್ತಿರುವ ರಕ್ಷಣಾ ಪಡೆಯ ಸೈನಿಕರಿಗೂ ಮತ್ತು ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿರುವ ಸರ್ಕಾರಿ ಸೌಲಭ್ಯಗಳ ತಾರತಮ್ಯದ ಬಗ್ಗೆ ಬೆಳಕು ಚೆಲ್ಲಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಹನುಮಂತರಾಜು, ಅರೆಸೇನಾ ಪಡೆ ಯೋಧರು ಮತ್ತು ಮಾಜಿ ಯೋಧರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದರು.

ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಸುದ್ದಿಗೋಷ್ಠಿ

ಸೈನಿಕರು ಯುದ್ಧದ ಸಮಯದಲ್ಲಿ ಮಾತ್ರ ದೇಶವನ್ನು ರಕ್ಷಣೆ ಮಾಡುತ್ತಾರೆ. ಆದರೆ, ಅರೆಸೇನಾ ಪಡೆಯ ಯೋಧರು ದುರ್ಗಮ ಸ್ಥಳಗಳಲ್ಲಿ ದಿನದ 24 ಗಂಟೆ ವರ್ಷದ 365 ದಿನವೂ ದೇಶದ ರಕ್ಷಣೆ ಮಾಡುತ್ತಾರೆ. ಭಾರತದಲ್ಲಿ 3.5 ಲಕ್ಷ ಅರೆಸೇನಾ ಪಡೆಯ ಯೋಧರಿದ್ದು, ಇದು ಏಷ್ಯಾದ ಅತಿ ದೊಡ್ಡ ಅರೆಸೇನಾ ಪಡೆಯಾಗಿದೆ.

ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (BSF) 16 ಸಾವಿರ ಕಿ.ಮೀ ಗಡಿಯನ್ನ ಕಾಯುತ್ತಿದೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ (ITBP) 2.800 ಕಿ.ಮೀ. ಗಡಿ ಕಾಯುತ್ತಿದೆ.

ಸಶಸ್ತ್ರ ಸೀಮಾ ಬಲ (SSB) 1,250 ಕಿ.ಮೀ ಗಡಿ ಕಾಯುತ್ತಿದೆ. ಅಸ್ಸೋಂ ರೈಫಲ್ಸ್, ಸಿಐಎಸ್​​ಎಫ್, ಸಿಆರ್ಪಿಎಫ್ ದೇಶದ ಆಂತರಿಕ ಸುರಕ್ಷೆಯಲ್ಲಿ ಬಹುಮುಖ್ಯ ಪಾತ್ರವಸುತ್ತಿವೆ. ಈ 6 ಅರೆಸೇನಾ ಪಡೆಗಳು ಕೇಂದ್ರೀಯ ಗೃಹ ಮಂತ್ರಾಲಯದ ವ್ಯಾಪ್ತಿಯಲ್ಲಿ ಬರುತ್ತಿದೆ. ಆದರೆ, ಆರ್ಮಿ, ನೇವಿ ಮತ್ತು ಏರ್ಪೋರ್ಸ್ ಯೋಧರಿಗೆ ಸಿಗುವ ಸರ್ಕಾರಿ ಸೌಲಭ್ಯ ಮಾತ್ರ ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿಲ್ಲ.

ಅರೆಸೇನಾ ಪಡೆಯ ಯೋಧ ತನ್ನ 18 ವರ್ಷಕ್ಕೆ ಸೇವೆಗೆ ಸೇರಿ 20 ವರ್ಷ ದೇಶ ಸೇವೆ ಮಾಡುತ್ತಾನೆ. ತನ್ನ ಯೌವನದ 20 ವರ್ಷಗಳನ್ನ ದೇಶಕ್ಕಾಗಿ ಕೊಡುತ್ತಾನೆ. 20 ವರ್ಷಗಳ ಸೇವೆಯಲ್ಲಿ ಕುಟುಂಬದೊಂದಿಗೆ ಕಳೆಯಲು 3 ವರ್ಷ ರಜೆ ಸಹ ಸಿಗುವುದಿಲ್ಲ.

ಕುಟುಂಬದೊಂದಿಗೆ ಸಮಯ ಕಳೆಯದೆ ಮತ್ತು ಕೆಲಸದ ಒತ್ತಡದಿಂದ ಅರೆಸೇನಾ ಪಡೆಯ ಯೋಧರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಗೃಹ ಸಚಿವರಾದ ಅಮಿತ್ ಶಾ ವರ್ಷಕ್ಕೆ 100 ದಿನಗಳ ರಜೆಯನ್ನು ನೀಡಿದರು. ಆದರೆ, ಕೇಂದ್ರ ಗೃಹ ಮಂತ್ರಾಲಯದ ಐಪಿಎಸ್ ಅಧಿಕಾರಿಗಳು ಅರೆಸೇನಾ ಪಡೆ ಸಿವಿಲ್ ಪೋರ್ಸ್ ಎಂಬ ಕಾರಣಕ್ಕೆ ಈ ಆದೇಶವನ್ನ ವಜಾ ಮಾಡಿದೆ.

ಇದನ್ನೂ ಓದಿ : ಹರಿಹರದಲ್ಲಿ ನಾಗರಿಕತೆ ಬಗ್ಗೆ ಪಾಠ ಮಾಡಿದ ಸಿಎಂ ಬೊಮ್ಮಾಯಿ

ಆರ್ಮಿ, ನೇವಿ ಮತ್ತು ಏರ್ಪೋರ್ಸ್ ಪಡೆಗಳ ಮುಖ್ಯಸ್ಥರು ಅಲ್ಲಿನ ಅಧಿಕಾರಿಗಳು ಆಗಿರುವುದರಿಂದ ಅವರು ಸೈನಿಕರ ಹಿತಾ ಕಾಯುತ್ತಾರೆ. ಅರೆಸೇನಾ ಪಡೆಗಳ ಮುಖ್ಯಸ್ಥರು ಐಪಿಎಸ್ ಅಧಿಕಾರಿಗಳು, ಅರೆಸೇನಾ ಪಡೆಯ ಯೋಧರ ಸಮಸ್ಯೆಗಳನ್ನ ತಿಳಿಯುವಷ್ಟರಲ್ಲಿ ಅವರ ವರ್ಗಾವಣೆಯಾಗಿರುತ್ತೆ. ಆದ್ದರಿಂದ ಅರೆಸೇನಾ ಪಡೆಯ ಅಧಿಕಾರಿಗಳೇ ಮುಖ್ಯಸ್ಥರಾಗಬೇಕು ಎಂದು ಆಗ್ರಹಿಸಿದರು.

ನಿವೃತ್ತರಾದ ಸೈನಿಕರಿಗೆ ರಾಜ್ಯ ಮತ್ತು ಮತ್ತು ಕೇಂದ್ರ ಸರ್ಕಾರದ ಉದ್ಯೋಗ, ಸಾರ್ವಜನಿಕ ಉದ್ಯಮಗಳು, ಅರೆ ಸರ್ಕಾರಿ ಉದ್ಯಮಗಳಲ್ಲಿ ಶೇ. 2.ರಷ್ಟು ಮೀಸಲಾತಿ ಇದೆ. ಆದರೆ, ಅರೆಸೇನಾಪಡೆಯ ಯೋಧರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಇಲ್ಲ.

ಅರೆಸೇನಾ ಪಡೆ ಯೋಧರ ಹೋರಾಟದ ಫಲ ಗೃಹ ಸಚಿವಾಲಯ 2012ರ ಜನವರಿ 23ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅರೆಸೇನಾ ಪಡೆಯ ಮಾಜಿ ಯೋಧರಿಗೆ ಮಿಸಲಾತಿ ನೀಡುವಂತೆ ಆದೇಶ ನೀಡಿದೆ. ಹರಿಯಾಣ, ಗೋವಾ ಮತ್ತು ತಮಿಳುನಾಡು ಸೇರಿದಂತೆ 7 ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದ್ರು ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಇದರ ಜೊತೆ One Rank One Pension (OROP), 2004ರ ನಂತರ ಸೇವೆಗೆ ಸೇರಿದ ಯೋಧರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೇ ಪಿಂಚಣಿ ಯೋಜನೆಯನ್ನ ಮುಂದುವರೆಸುವುದು, ಪ್ರತಿ ರಾಜ್ಯಗಳಲ್ಲೂ ಅರ್ಧ ಸೈನಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವುದು, ಅರೆಸೇನಾಪಡೆಗಳ ನಿವೃತ್ತ ಮಾಜಿ ಯೋಧರು, ಹುತಾತ್ಮ ಯೋಧರ ಕುಟುಂಬಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಕ್ಕಾಗಿ ಪ್ರತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ CGHS ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು, CPC ಕ್ಯಾಂಟೀನ್ ಗಳಿಗೂ 50% GST ವಿನಾಯಿತಿ ನೀಡುವಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.